ನ್ಯೂಸ್

ಟ್ರೆಡಿಷನಲ್​ ಡ್ರೆಸ್​ನಲ್ಲಿ ಮಿಂಚಿದ ಗುಳಿಕೆನ್ನೆ ಚೆಲುವೆ; ನಿಮ್ಮ ನಗುವೇ ಸುಂದರ ಎಂದ ಫ್ಯಾನ್ಸ್​

ಬೆಂಗಳೂರು: ಸ್ಯಾಂಡಲ್​ವುಡ್​ ಚೆಲುವೆ, ಡಿಂಪಲ್​ ಕ್ವೀನ್ ಎಂದೇ ಹೆಸರುವಾಸಿಯಾಗಿರುವ ನಟಿ​ ರಚಿತಾ ರಾಮ್​ ಚಂದನವನದ ಮೋಸ್ಟ್​ ಬ್ಯುಸಿ ನಟಿಯರ ಪೈಕಿ ಒಬ್ಬರಾಗಿದ್ದಾರೆ.

ಸ್ಯಾಂಡಲ್​ವುಡ್ ನಟಿ ರಚಿತಾ ರಾಮ್ ಅವರು ಸುಂದರವಾದ ತಿಳಿ ಕೇಸರಿ ಬಣ್ಣದ ಲಂಗ-ದಾವಣಿ ಧರಿಸಿ ಸುಂದರವಾಗಿ ಪೋಸ್ ಕೊಟ್ಟಿದ್ದಾರೆ. ನಟಿ ಆಕರ್ಷಕವಾಗಿ ಪೋಸ್ ಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಚಿತಾ ರಾಮ್ ಆರೇಂಜ್‌ ಗೋಲ್ಡ್‌ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ದೊಡ್ಡ ಡಾಲರ್‌ ಇರುವ ಮುತ್ತಿನ ಸರ ಧರಿಸಿದ್ದಾರೆ. ಕೆಂಪು ಬಿಂದಿಯನ್ನು ಹಣೆಗಿಟ್ಟುಕೊಂಡು ಮುದ್ದಾಗಿ ಕೈಗೆ ಕೆಂಪು ಬಣ್ಣದ ಗಾಜಿನ ಬಳೆಗಳನ್ನೂ ಧರಿಸಿರುವುದನ್ನು ನೋಡಬಹುದಾಗಿದೆ. ಸೂಪರ್​ ಮೇಡಂ ನಮ್ಮ ಸಂಸ್ಕೃತಿಯನ್ನು ಕಾಪಾಡುವವರು ನೀವೇ ಎಂದು ಕಮೆಂಟ್​ ಮಾಡಿದ್ಧಾರೆ.

ನಾಗಶೇಖರ್​ ನಿರ್ದೇಶನದ ಶ್ರೀನಗರ ಕಿಟ್ಟಿ ನಾಯಕನಾಗಿ ನಟಿಸುತ್ತಿರುವ ಸಂಜು-ವೆಡ್ಸ್​ ಗೀತಾ 2 ಸೇರಿದಂತೆ ಅನೇಕ ಚಿತ್ರಗಳಲ್ಲಿ ಬ್ಯುಸಿ ಇರುವ ರಚಿತಾ ರಾಮ್​ ಕನ್ನಡದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್​ನಲ್ಲಿ ತೀರ್ಪುಗಾರರಾಗಿದ್ಧಾರೆ.