ಬೆಂಗಳೂರು: ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸ್ಸೇಜ್ ಮಾಡಿದ ಎಂಬ ಕಾರಣಕ್ಕೆ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯನ್ನು ಹತ್ಯೆ ಮಾಡಿ ಎರಡನೇ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ಗೆ ದಿನ ಕಳೆದಂತೆ ಒಂದಿಲ್ಲೊಂದು ಸಂಕಷ್ಟಗಳು ಎದುರಾಗುತ್ತಿದೆ ಎಂದರೆ ತಪ್ಪಾಗಲಾರದು. ಸಮಾಜಕ್ಕೆ ಮಾದರಿಯಾಗಬೇಕಿದ್ದ ಸ್ಟಾರ್ನಟನೊಬ್ಬನ ಈ ಕೃತ್ಯ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ನಟ ದರ್ಶನ್ರನ್ನು ಕಾಣಲು ಪ್ರತಿನಿತ್ಯ ಜೈಲಿನ ಬಳಿ ಅವರ ಕುಟುಂಬಸ್ಥರು ಬರುತ್ತಿದ್ದಾರೆ.
ಇದೆಲ್ಲದರ ನಡುವೆಯೇ ನಟ ದರ್ಶನ್ರನ್ನು ಜೈಲಿನಲ್ಲಿ ನಟಿ ರಚಿತಾ ರಾಮ್ ಭೇಟಿಯಾಗಿ ಮಾತುಕತೆ ನಡೆಸಿದ್ದು, ಆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ. ನಟ ದರ್ಶನ್ ಭೇಟಿ ಕುರಿತು ಮಾತನಾಡುವ ವೇಳೆ ಅವರು ಭಾವುಕರಾಗಿದ್ದಾರೆ.
ನಾನು ಅವರ ಬ್ಯಾನರ್ನಿಂದಲೇ ಚಿತ್ರರಂಗ ಪ್ರವೇಶಿಸಿದವಳು. ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು, ದರ್ಶನ್ ಸರ್. ಇವತ್ತು ಚಿತ್ರರಂಗದಲ್ಲಿ ನಾನೇನು ಹೆಸರು ಮಾಡಿದ್ದರೆ ಅದಕ್ಕೆ ದರ್ಶನ್ ಸರ್ ಕಾರಣ. ಅವತ್ತು ದರ್ಶನ್ ಸರ್ ಏನಾದ್ರು ನೋ ಅಂದಿದ್ದರೆ ಬಿಂದ್ಯಾ ರಾಮ್ ರಚಿತಾ ರಾಮ್ ಆಗುತ್ತಿರಲು ಸಾಧ್ಯವಿರಲಿಲ್ಲ. ಅವರ ಒಂದು ಋಣ ನನ್ನ ಇಡೀ ಕುಟುಂಬದ ಮೇಲಿದೆ. ಜೈಲಿನಲ್ಲಿ ಅವರೇ ನನಗೆ ಧೈರ್ಯ ತುಂಬಿದರು. ಬಾಸ್ ವೀ ಆರ್ ವೇಟಿಂಗ್ ಫಾರ್ ಯೂ, ಆದಷ್ಟು ಬೇಗ ನಮಗೆ ಒಳ್ಳೆಯ ಸುದ್ದಿ ಸಿಗಲಿ ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ನಟಿ ರಚಿತಾ ರಾಮ್ ಸಿನಿಮಾಗಳು: ಇವರ ಮೂಲ ಹೆಸರು ಬಿಂದ್ಯಾ ರಾಮ್. ಮೊದಲಿಗೆ ಅರಸಿ ಎಂಬ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಇದಾದ ಬಳಿಕ ಬುಲ್ ಬುಲ್ ಸಿನಿಮಾದಲ್ಲಿ ದರ್ಶನ್ ಜತೆ ನಾಯಕಿಯಾಗಿ ನಟಿಸಿದರು. ಇದಾದ ಬಳಿಕ ದಿಲ್ ರಂಗೀಲಾ, ಅಂಬರೀಶಾ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬುಲ್ ಬುಲ್, ದಿಲ್ ರಂಗೀಲಾ, ಅಂಬರೀಶಾ, ರನ್ನ, ರಥಾವರ, ಚಕ್ರವ್ಯೂಹ, ಭರ್ಜರಿ, ಪುಷ್ಪಕ ವಿಮಾನ, ಸೀತಾರಾಮ ಕಲ್ಯಾಣ, ನಟ ಸಾರ್ವಭೌಮ, ಆಯುಷ್ಮಾನ್ ಭವ, ಕ್ರಾಂತಿ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿ ರಚಿತಾ ರಾಮ್ ನಟಿಸಿದ್ದಾರೆ.