ಕಣ್ಣೂರು: ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನೆರೆಮನೆಯ ಮಗುವಿನ ಪ್ರಾಣ ಉಳಿಸಲು ಹೋಗಿ ಯುವತಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಕೇರಳದ ಮಟ್ಟನೂರ್ ನದಿಯಲ್ಲಿ ನಡೆದಿದೆ.
ಮೃತಳನ್ನು ಅಮೃತಾ (25) ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ.
ನದಿಗೆ ಬಿದ್ದ ನೆರೆಮನೆಯ ಮಗುವನ್ನು ಕಾಪಾಡಲು ಅಮೃತಾ ನದಿಗೆ ಜಿಗಿದಿದ್ದಳು. ಆದರೆ, ಸುಳಿಗೆ ಸಿಲುಕಿ ಅಮೃತಾ ಪ್ರಾಣ ಬಿಟ್ಟಿದ್ದಾಳೆ. ಅದೃಷ್ಟವಶಾತ್ ಘಟನೆಯಲ್ಲಿ ಮಗು ಬದುಕುಳಿದಿದೆ.
ಅಮೃತ ಮುಂಡೇರಿ ಪ್ರೌಢಶಾಲೆಯ ಲ್ಯಾಬ್ ಸಹಾಯಕ ಸಿ ಬಾಲಕೃಷ್ಣನ್ ಮತ್ತು ರಮಣಿಯವರ ಪುತ್ರಿ. ಅನಘಾ ಅವಳ ಸಹೋದರಿ. ಇದೀಗ ಮಗಳನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. (ಏಜೆನ್ಸೀಸ್)