ನ್ಯೂಸ್

ಮದುವೆಯಾದ ಮೊದಲ ರಾತ್ರಿ ಗಂಡ ಹೇಳಿದ್ದನ್ನು ಕೇಳಿ ಶಾಕ್​ ಆದ ನವವಧು!

ಗುಂಟೂರು: ಮದುವೆಯಾದ ನಂತರ ಮೊದಲ ರಾತ್ರಿಯಂದು ಅನೇಕ ಭರವಸೆಗಳೊಂದಿಗೆ ಗಂಡನಿರುವ ಕೋಣೆಯೊಳಗೆ ಹೆಜ್ಜೆ ಹಾಕಿದ ನವವಧುವಿಗೆ ಜೀವನದಲ್ಲೇ ಅತ್ಯಂತ ಕಹಿ ಅನುಭವವಾದ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ಬೆಳಕಿಗೆ ಬಂದಿದೆ.

ವಿವರಣೆಗೆ ಬರುವುದಾದರೆ, ತೆನಾಲಿ ಮೂಲದ ಎಂಡಿ ಜಲಾಲುದ್ದೀನ್​ ಮತ್ತು ಕೌಸರ್​ ಜಾನ್​ ದಂಪತಿಯ ಮೂರನೇ ಮಗಳನ್ನು ವಿಜಯವಾಡದ ಆಟೋನಗರ ಮೂಲದ ಖಜಖಾನ್​ಗೆ ತೆನಾಲಿಯ ಪಾಂಡುರಂಗ ಪೇಟಾದಲ್ಲಿ ಏಪ್ರಿಲ್​ 4ರಂದು ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು.

ಮದುವೆ ಬಳಿಕ ಕೆನಾಡಗೆ ಹೋಗಿ ನೆಲೆಸೋಣ ಎಂದು ನವವರ, ನವವಧುವಿಗೆ ಭರವಸೆ ನೀಡಿದ್ದ. ಆದರೆ, ಮದುವೆಯಾದ ಮೊದಲ ರಾತ್ರಿ ವಧುವಿಗೆ ಬಹುದೊಡ್ಡ ಶಾಕ್​ ಆಗಿದೆ. ನಾನು ಯಾವುದಕ್ಕೂ ಉಪಯೋಗವಿಲ್ಲದವನು ಎಂಬ ವರನ ಹೇಳಿಕೆ ಕೇಳಿ ವಧುವಿಗೆ ಆಘಾತವಾಗಿದೆ.

ಇತ್ತ ಏನು ಮಾಡಬೇಕೆಂದು ತಿಳಿಯದೇ ಗೊಂದಲಕ್ಕೀಡಾದ ವಧು, ಕೊನೆಗೆ ಪಾಲಕರಿಗೆ ತಿಳಿಸಿ, ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ. (ಏಜೆನ್ಸೀಸ್​)