ಹೈದರಬಾದ್: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ವಿವಾದಗಳ ಕೇಂದ್ರ ಬಿಂದು ಎಂಬುದು ಗೊತ್ತಿರುವ ವಿಚಾರ. ಸದಾ ವಿವಾದಗಳನ್ನೇ ಹುಟ್ಟುಹಾಕವ ಮೂಲಕ ಸುದ್ದಿಯಾಗುವುದೇ ಇವರ ಖಯಾಲಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ಬಿಗ್ಬಾಸ್ ಬ್ಯೂಟಿ ಅರಿಯಾನಾ ಗ್ಲೋರಿ ಜತೆಗೆ ಆರ್‌ಜಿವಿ ಒನ್ ಟು ಒನ್ ಸಂದರ್ಶನದಲ್ಲಿ ಬೋಲ್ಡ್ ಆಗಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಮತ್ತೊಬ್ಬ ಬಿಗ್ಬಾಸ್ ಬ್ಯೂಟಿ ಆಶು ರೆಡ್ಡಿ ಜತೆ "ಬೋಲ್ಡ್ ಇಂಟರ್ವ್ಯೂವ್ ವಿತ್ ಆಶು ರೆಡ್ಡಿ" ಎಂಬ ಸಂದರ್ಶನ ಮಾಡಿರುವ ಆರ್‌ಜಿವಿ ಕಪಾಳಕ್ಕೆ ಏಟು ಸಹ ತಿಂದಿದ್ದಾರೆ.
ಆರ್‌ಜಿವಿ ತಾವು ಮಾಡಿರುವ ಮುಂದಿನ ಹಾಟ್ ಆ್ಯಂಡ್ ಬೋಲ್ಡ್ ಸಂದರ್ಶನದಲ್ಲಿ ಆಶು ರೆಡ್ಡಿ ಭಾಗಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರೊಮೋವನ್ನು ತಮ್ಮ ಆರ್‌ಜಿವಿ ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ. ಪ್ರೊಮೋದಲ್ಲಿ ಆರ್‌ಜಿವಿ ಕಾಫಿ ಶಾಪ್ ಒಂದಕ್ಕೆ ಪ್ರವೇಶಿಸಿದಾಗ ಆಶು ರೆಡ್ಡಿ ಕಾಫಿ ಕುಡಿಯುತ್ತಾ ಕುಳಿತಿರುತ್ತಾರೆ. ಅವಳೊಂದಿಗೆ ಮಾತನಾಡಲು ಪ್ರಯತ್ನಿಸುವ ಆರ್‌ಜಿವಿ, ಆರಂಭದಲ್ಲೇ ನಿಮ್ಮ ತೊಡೆ ಅಂದ್ರೆ ನನಗೆ ತುಂಬಾ ಇಷ್ಟ ಅನ್ನುತ್ತಾನೆ. ಹೀಗಂದ ತಕ್ಷಣವೇ ಆಶು ರೆಡ್ಡಿ, ಆರ್‌ಜಿವಿ ಕೆನ್ನೆಗೆ ಬಾರಿಸುತ್ತಾಳೆ. ಇದಿಷ್ಟು ಬಿಡುಗಡೆಯಾಗಿರುವ ಪ್ರೊಮೋದಲ್ಲಿದೆ.
ಈ ವಿಡಿಯೋ ಸಂಬಂಧ ತಮ್ಮ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿರುವ ಆರ್‌ಜಿವಿ, ಇದು ಮುಂದಿನ ನನ್ನ ಸಂದರ್ಶನದ ಪ್ರೊಮೋ ಆಗಿದೆ, ಇದನ್ನು ಹಾಸ್ಯಾತ್ಮಕ ರೀತಿಯಲ್ಲಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇವೆಂದು ಹೇಳಿದ್ದಾರೆ.
ಆಶು ರೆಡ್ಡಿ ಯಾರು ಎಂದು ನೋಡುವುದಾದರೆ, ಆಕೆ ತೆಲುಗು ಚಿತ್ರರಂಗದ ನಟಿ. ಅಲ್ಲದೆ, ಡಬ್ಸ್ಮ್ಯಾಶರ್ ಕೂಡ ಹೌದು. ಚಲ್ ಮೋಹನ್ ರಂಗ ಚಿತ್ರದ ಮೂಲಕ ಟಾಲಿವುಡ್ ಚಿತ್ರರಂಗದಲ್ಲಿ ತಮ್ಮ ಸಿನಿ ಜರ್ನಿ ಆರಂಭಿಸಿದ್ದಾರೆ. ಬಿಗ್ಬಾಸ್ ಸಿಸನ್ 3ರಲ್ಲಿ ತುಂಬಾ ಗುರುತಿಸಿಕೊಂಡವರು. ಹ್ಯಾಪಿ ಡೇಸ್ ಎಂಬ ಕಾರ್ಯಕ್ರಮದ ಮೂಲಕ ಟಿವಿ ನಿರೂಪಕರಾಗಿಯು ಕಾಣಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ರಾಜ್ಯಸಭಾ ಸಂಸದ ಜೋಗಿನಪಲ್ಲಿ ಸಂತೋಷ್ ರೆಡ್ಡಿ ಆರಂಭಿಸಿದ ಗ್ರೀನ್ ಇಂಡಿಯಾ ಚಾಲೆಂಜ್ನಲ್ಲಿ ಭಾಗವಹಿಸಿ, ಜುಬಿಲಿ ಹಿಲ್ಸ್‌ನ ಜಿಎಚ್‌ಎಂಸಿ ಪಾರ್ಕ್‌ನಲ್ಲಿ ಸಸಿಗಳನ್ನು ನೆಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆಶು ರೆಡ್ಡಿ ಇನ್ಸ್ಟಾಗ್ರಾಂಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ನೋಡಲು ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಹೋಲಿಕೆಯು ಆಕೆಗೆ ಸ್ವಲ್ಪ ಖ್ಯಾತಿಯನ್ನು ತಂದುಕೊಟ್ಟಿದೆ.
ಕೆಲವು ತಿಂಗಳ ಹಿಂದೆ ಬಿಗ್ಬಾಸ್ ಬ್ಯೂಟಿ ಅರಿಯಾನಾ ಜತೆ ಆರ್‌ಜಿವಿ ಬೋಲ್ಡ್ ಸಂದರ್ಶನ ಮಾಡಿದ್ದರು. ದೇಹದ ಅಂಗಾಂಗ, ಸೆಕ್ಸ್, ರೊಮ್ಯಾನ್ಸ್, ಸಂಬಂಧ (ಅಫೇರ್) ಮುಂತಾದ ವಿಚಾರಗಳ ಬಗ್ಗೆ ಮುಕ್ತಾವಾಗಿ ಆರ್‌ಜಿವಿ ಮಾತನಾಡಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಅಲ್ಲದೆ, ಟ್ರೋಲಿಗರಿಗೆ ಆರ್‌ಜಿವಿ ಮತ್ತು ಅರಿಯಾನಾ ಹಾಟ್ ಸಂದರ್ಶನವು ಆಹಾರವಾಗಿತ್ತು. (ಏಜೆನ್ಸೀಸ್)