ನ್ಯೂಸ್

ಗ್ಯಾಸ್​ ಸಿಲಿಂಡರ್​ ದರ ಏರಿಕೆ ವಿರೋಧಿಸಿ ಪ್ರತಿಭಟನೆ: ಶಾಸಕ ಧರಿಸಿದ್ದ ಟೀ-ಶರ್ಟ್​ ಬೆಲೆ ಕೇಳಿದ್ರೆ ದಂಗಾಗ್ತೀರಾ!

ಹೈದರಾಬಾದ್​: ಧಾನ್ಯ ಖರೀದಿ ವಿಚಾರದಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್​ಎಸ್) ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಟಿಆರ್‌ಎಸ್​ನ ಎಲ್ಲ ಸಂಸದರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೇಂದ್ರ ಧೋರಣೆಯನ್ನು ಖಂಡಿಸಿ ಪ್ರತಿಭಟಿಸಿದ್ದಾರೆ.

ಆರ್ಮರ್ ಕ್ಷೇತ್ರದ ಶಾಸಕ ಜೀವನ್​ ರೆಡ್ಡಿ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಈ ವೇಳೆ ಅವರು ಗ್ಯಾಸ್​ ಸಿಲಿಂಡರ್​ ಅನ್ನು ತಲೆಯ ಮೇಲೆ ಹೊತ್ತು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ಮೂಲಕ ಸಿಲಿಂಡರ್​ ದರ ಏರಿಕೆಯನ್ನು ಖಂಡಿಸಿದರು. ಆದಾಗ್ಯೂ ತಾವು ಧರಿಸಿದ್ದ ಟೀ-ಶರ್ಟ್​ನಿಂದ ಜೀವನ್​ ರೆಡ್ಡಿ ಟ್ರೋಲ್​ ಕೂಡ ಆಗಿದ್ದಾರೆ. ಅವರು ಧರಿಸಿದ್ದ ಟೀ-ಶರ್ಟ್​ ಅನ್ನು ಗುರಿಯಾಗಿಸಿ ಪ್ರತಿಪಕ್ಷದ ನಾಯಕರು ಟೀಕೆಗಳ ಸುರಿಮಳೆಗೈದಿದ್ದಾರೆ.

ಅಂದಹಾಗೆ ಜೀವನ್​ ರೆಡ್ಡಿ ಧರಿಸಿದ್ದು ಬಲ್ಮೇನ್​ ಪ್ಯಾರೀಸ್​ ಕಂಪನಿ ಟಿ ಶರ್ಟ್ಸ್​. ಅದೇ ಹೆಸರಿನ ಸುಳಿವಿನಿಂದ ಈ ಕಾರ್ಮರ್ಸ್​ ಕಂಪನಿ ಮೂಲಕ ಬಲ್ಮೇನ್​ ಪ್ಯಾರೀಸ್​ ಶರ್ಟ್​ ಬೆಲೆಯನ್ನು ಹುಡುಕಾಡಿದಾಗ ಅದರ ಮೇಲೆ ನೋಡಿ ಎಲ್ಲರೂ ದಂಗಾಗಿದ್ದಾರೆ. ಟೀ-ಶರ್ಟ್​ ಬೆಲೆ ಬರೋಬ್ಬರಿ 547 ಡಾಲರ್​. ಭಾರತೀಯ ಕರೆನ್ಸಿ ಪ್ರಕಾರ 42 ಸಾವಿರ ರೂಪಾಯಿ.

ಟೀ-ಶರ್ಟ್​ ಬೆಲೆ ಇರುವ ಸ್ಕ್ರೀನ್​ ಶಾಟ್ಸ್​ ತೆಗೆದು ಇದೀಗ ಜೀವನ ರೆಡ್ಡಿ ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ. 42 ಸಾವಿರ ಬೆಲೆ ದುಬಾರಿ ಟೀ-ಶರ್ಟ್​ ಹಾಕೊಂಡು 50 ರೂಪಾಯಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಗಿದ್ದಾರೆ.

ಅಂದಹಾಗೆ ಮಾರ್ಚ್​ 22ರಂದು ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯ ಜತೆಗೆ ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ 50 ರೂಪಾಯಿ ಏರಿಕೆಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಗ್ರಾಹಕರಲ್ಲಿ ಅಸಮಾಧಾನ ಶುರುವಾಗಿದೆ. (ಏಜೆನ್ಸೀಸ್​)