ನ್ಯೂಸ್

VIDEO| ದುರ್ಗಾ ಮೂರ್ತಿ ವಿಸರ್ಜಿಸಿ ಮನೆಗೆ ಬಂದವರಿಗೆ ಕಾದಿತ್ತು ಶಾಕ್​: ಚಿರತೆ ನೋಡಿ ಬೆಚ್ಚಿಬಿದ್ದ ಕುಟುಂಬ

ಮುಂಬೈ: ಚಿರತೆಯೊಂದು ಮನೆಯೊಳಗೆ ನುಗ್ಗಿದ ಘಟನೆ ಮಹಾರಾಷ್ಟ್ರದ ಸತಾರ ಜಿಲ್ಲೆಯ ಕೊಯಾನಗರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ದುರ್ಗಾ ಮೂರ್ತಿಯ ವಿಸರ್ಜನೆಗೆಂದು ಕುಟುಂಬದ ಸದಸ್ಯರೆಲ್ಲರು ಹೊರಗಡೆ ತೆರಳಿದ್ದರು. ಇದೇ ಸಮಯದಲ್ಲಿ ಚಿರತೆಯು ಮನೆಯೊಳಗೆ ನುಗ್ಗಿದೆ. ಮೂರ್ತಿ ವಿಸರ್ಜಿಸಿ ಮನೆಯ ಸದಸ್ಯರೆಲ್ಲರು ವಾಪಸ್​ ಬಂದಾಗ ಮನೆಯ ಬಾಗಿಲು ಮುಂದೆಯೇ ಚಿರತೆ ಕುಳಿತಿರುವುದನ್ನು ಕಂಡು ಎಲ್ಲರು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಮನೆಯವರು ಓಡಿ ಹೋಗಿ ಗೇಟ್​ ಬಾಗಿಲು ಬಂದ್​ ಮಾಡಿ ಚಿರತೆಯನ್ನು ಕೂಡಿ ಹಾಕಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ಜನರ ಗುಂಪು ಮನೆಯ ಸುತ್ತಲೂ ಜಮಾಯಿಸಿತು ಮತ್ತು ಅನೇಕರು ಚಿರತೆ ಮನೆ ಒಳಗೆ ಸುತ್ತಾಡುತ್ತಿರುವುದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಸಹ ಆಗಿದೆ.

ಸದ್ಯ ಅರಣ್ಯ ಇಲಾಖೆಗೆ ಚಿರತೆ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಚಿರತೆಯನ್ನು ಸೆರೆಹಿಡಿದಿದ್ದಾರೆ. (ಏಜೆನ್ಸೀಸ್​)

(ವಿಡಿಯೋ ಕೃಪೆ: ಎನ್​ಡಿಟಿವಿ)