ಡೂಪ್ಲಿಕೇಟ್​ ಸಿಮ್​ ಖರೀದಿಸಲು ಬಂದ ನಟಿಯನ್ನು ಶೋ ರೂಮ್​ನಲ್ಲಿ ಕೂಡಿ ಹಾಕಿ ಕೆಟ್ಟದಾಗಿ ವರ್ತಿಸಿದ ಉದ್ಯೋಗಿ!

Reshma Rajan
Published on

ಕೊಚ್ಚಿ: ಖಾಸಗಿ ಟೆಲಿಕಾಂ ಕಂಪನಿಯ ಉದ್ಯೋಗಿಯೊಬ್ಬರು ಶೋ ರೂಮ್​ನಲ್ಲಿ ಕೂಡಿ ಹಾಕಿ, ಬೆದರಿಕೆ ಹಾಕಿದರು ಎಂದು ಮಲಯಾಳಂ ನಟಿ ಅನ್ನಾ ರೇಷ್ಮಾ ರಾಜನ್ ಅವರು ದೂರು ದಾಖಲಿಸಿದ್ದಾರೆ. ​​

ಡೂಪ್ಲಿಕೇಟ್​ ಸಿಮ್​ ತರಲೆಂದು ಕೇರಳದ ಅಲುವಾದಲ್ಲಿರುವ ಟೆಲಿಕಾಂ ಶೋ ರೂಮ್​ಗೆ ಹೋದಾಗ ಅಲ್ಲಿನ ಉದ್ಯೋಗಿ ಒಬ್ಬರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ಅಲ್ಲದೆ, ಶೋ ರೂಮ್​ನ ಶಟರ್​ ಅನ್ನು ಎಳೆದು, ನನ್ನನ್ನು ಕೂಡಿ ಹಾಕಿ ಬೆದರಿಕೆ ಸಹ ಹಾಕಿದರು ಎಂದು ದೂರಿನಲ್ಲಿ ರೇಷ್ಮಾ ಉಲ್ಲೇಖಿಸಿದ್ದಾರೆ.

ದೂರಿನ ಬಳಿಕ ಪೊಲೀಸ್​ ಠಾಣೆಗೆ ಆಗಮಿಸಿದ ಉದ್ಯೋಗಿ ನನ್ನ ಬಳಿ ಕ್ಷಮೆಯಾಚಿಸಿದ. ಹೀಗಾಗಿ ಆತನ ಉದ್ಯೋಗ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಕರಣವನ್ನು ಮುಂದುವರಿಸಲು ಹೋಗಲಿಲ್ಲ ಎಂದು ರೇಷ್ಮಾ ಹೇಳಿದ್ದಾರೆ.

ಅಂದಹಾಗೆ ರೇಷ್ಮಾ ಅವರು ಲಿಜೋ ಜೋಸ್ ಪಲ್ಲಿಸ್ಸೆರಿ ನಿರ್ದೇಶನದ 'ಅಂಗಮಾಲಿ ಡೈರೀಸ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ರೇಷ್ಮಾ ಅವರ ಇತರ ಗಮನಾರ್ಹ ಚಿತ್ರಗಳೆಂದರೆ ವೇಲಿಪದಿಂತೆ ಪುಸ್ತಕಂ, ಲೋನಪ್ಪಂತೆ ಮಾಮೋದಿಸ, ಮಧುರ ರಾಜ ಮತ್ತು ಅಯ್ಯಪ್ಪನುಂ ಕೊಶಿಯುಂ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net