More

  ಕೇನ್ಸ್​ ಫಿಲ್ಸ್​ ಫೆಸ್ಟಿವಲ್​ 2024: ಜಗತ್ತಿನ 6 ಪ್ರತಿಭಾವಂತ ಮಹಿಳೆಯರಲ್ಲಿ ಭಾರತದಿಂದ ಕಿಯಾರಾ ಅಡ್ವಾಣಿ

  ನವದೆಹಲಿ: ಪ್ರತಿವರ್ಷ ನಡೆಯಲಿರುವ ಕೇನ್ಸ್ ಫಿಲ್ಮ್​ ಫೆಸ್ಟಿವಲ್ ಅನ್ನು​ ಈ ಬಾರಿ ಫ್ರಾನ್ಸ್​ನಲ್ಲಿ ಆಯೋಜಿಸಲಾಗಿದೆ. ಪ್ರತಿಷ್ಠಿತ ಕೇನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2024ರ ವೇದಿಕೆಯಲ್ಲಿ ವಿವಿಧ ದೇಶಗಳ ಸೆಲೆಬ್ರಿಟಿಗಳನ್ನು ಕೂಡ ಆಹ್ವಾನಿಸಲಾಗಿದ್ದು, ಇವರ ಪೈಕಿ ಬಾಲಿವುಡ್​ ಚಿತ್ರರಂಗದ ಸ್ಟಾರ್​ ನಟಿ ಕಿಯಾರಾ ಅಡ್ವಾಣಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಹಲವಾರು ಭಾರತೀಯ ನಟರು ಸಹ ಈ ವೇದಿಕೆಯಲ್ಲಿ ತಮ್ಮ ಛಾಪನ್ನು ಮೂಡಿಸಲು ಸಜ್ಜಾಗಿದ್ದಾರೆ.

  ಇದನ್ನೂ ಓದಿ: ಕವರ್​​​ ಪೇಜ್​ಗಾಗಿ ಬೋಲ್ಡ್​ ಅವತಾರ ತಾಳಿದ ರಶ್ಮಿಕಾ! ಚಸ್ಮಾ ಸುಂದರಿಯ ಗ್ಲಾಮರಸ್​ ಫೋಟೋಗಳು ವೈರಲ್​

  ಇತ್ತೀಚಿನ ವರದಿಗಳ ಪ್ರಕಾರ, ‘ಗೇಮ್ ಚೇಂಜರ್’ ನಟಿ ಕಿಯಾರಾ ಅಡ್ವಾಣಿ, ಕೇನ್ಸ್ ಫಿಲ್ಮ್ ಫೆಸ್ಟಿವಲ್ 2024ರಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದು, ಕ್ಯಾನೆಸ್‌ನಲ್ಲಿ ವ್ಯಾನಿಟಿ ಫೇರ್ ಆಯೋಜಿಸಿರುವ ರೆಡ್ ಸೀ ಫಿಲ್ಮ್ ಫೌಂಡೇಶನ್‌ನ ವುಮೆನ್ ಇನ್ ಸಿನಿಮಾ ಗಾಲಾ ಔತಣಕೂಟಕ್ಕೆ ಹಾಜರಾಗಲಿದ್ದಾರೆ. ಈ ಕಾರ್ಯಕ್ರಮವು ರೆಡ್ ಸೀ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ಯಾನೆಲ್‌ನಲ್ಲಿ ಭಾಗವಹಿಸುವ ಕಿಯಾರಾ ಅಡ್ವಾಣಿ, ಸಲ್ಮಾ ಅಬು ಡೀಫ್, ಸರೋಚಾ ಚಂಕಿಮ್ಹಾ (ಫ್ರೀನ್), ಅಧ್ವಾ ಫಹಾದ್, ಅಸೀಲ್ ಓಮ್ರಾನ್ ಮತ್ತು ರಮಾತಾ-ತೌಲೇ ಸೈ ಸೇರಿದಂತೆ ಜಗತ್ತಿನ ಆರು ಪ್ರತಿಭಾವಂತ ಮಹಿಳೆಯರು ಈ ಕಾರ್ಯಕ್ರಮದ ಅತಿಥಿಗಳಾಗಿದ್ದಾರೆ.

  ಮನರಂಜನಾ ಉದ್ಯಮಕ್ಕೆ ನಟಿಯರ ಮಹತ್ವದ ಕೊಡುಗೆಗಳನ್ನು ಅಂಗೀಕರಿಸಿ, ಫಿಲ್ಮ್ ಫೆಸ್ಟಿವಲ್ ಸಮಾರಂಭಕ್ಕೆ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಕಿಯಾರಾ ಅಡ್ವಾಣಿ, ಐಶ್ವರ್ಯ ರೈ ಬಚ್ಚನ್, ಸೋಭಿತಾ ಧೂಳಿಪಾಲ ಮತ್ತು ಅದಿತಿ ರಾವ್ ಹೈದರಿ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಲಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).

  ತನ್ನ ಪತಿ​ ರಾಹುಲ್​ಗೆ ಬೈದ LSG ಮಾಲೀಕನಿಗೆ ಅತಿಯಾ ಶೆಟ್ಟಿ ಕೊಟ್ರಾ ತಿರುಗೇಟು? ಫೋಟೋ ವೈರಲ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts