ನ್ಯೂಸ್

VIDEO| ಪ್ರಧಾನಿ ಮೋದಿ, ಬಿಜೆಪಿ ಸರ್ಕಾರದ ಬಗ್ಗೆ ವ್ಯಂಗ್ಯವಾಡಿರುವ TRS ಪಕ್ಷದ ಈ ಸಾಂಗ್ ವೈರಲ್ ಆಗ್ತಿದೆ!

ಬೆಂಗಳೂರು: ಕಾಂಗ್ರೆಸ್ ಬಳಿಕ ಇದೀಗ ತೆಲಂಗಾಣದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್) ಪಕ್ಷ ಕೂ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಟಿಆರ್​ಎಸ್​ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಿಂದ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ನೀಡಿದ ಭರವಸೆಗಳನ್ನು ಈಡೇರಿಸದಿರುವ ಬಗ್ಗೆ ಹಾಡಿನ ಮೂಲಕ ಪ್ರಶ್ನೆ ಎತ್ತಿದೆ ಮತ್ತು ವ್ಯಂಗ್ಯವಾಡಿದೆ.

ಪಂಜಾಬಿ ಸಂಗೀತದೊಂದಿಗೆ ಮೂಡಿಬಂದಿರುವ ಈ ಹಾಡು ಈಗ ಕೂ ವೇದಿಕೆಯಲ್ಲಿ ಸಾಕಷ್ಟು ವೈರಲ್ ಆಗಿದೆ. 'ಜುಮ್ಲೆ ಲೇ ಲೋ ಜುಮ್ಲೆ ಜಿ' ಎಂದು ಎಲ್ಲರು ಗುನುಗುತಿದ್ದಾರೆ.

ಟಿಆರ್‌ಎಸ್ ಪಕ್ಷ ಹಂಚಿಕೊಂಡಿರುವ ವೀಡಿಯೊ ಪೋಸ್ಟ್‌ನಲ್ಲಿ ಹಣದುಬ್ಬರ ಮತ್ತು ನಿರುದ್ಯೋಗದ ವಿಷಯದ ಕುರಿತು ಪ್ರಧಾನಿ ಮೋದಿ ಸಂಸತ್ತಿನಲ್ಲಿ, ರ‍್ಯಾಲಿಯಲ್ಲಿ ನೀಡಿರುವ ಎಲ್ಲಾ ಭರವಸೆಗಳ ಕುರಿತು ಪ್ರಶ್ನೆ ಮಾಡಿದೆ. ತಮ್ಮ ಸರ್ಕಾರ ಜನರಿಗೆ ಅಚ್ಛೇ ದಿನ್ ನೀಡಲಿದೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದರು. ಮೋದಿ ಅವರ ಈಡೇರದ ಮಾತುಗಳನ್ನೇ ಇಟ್ಟುಕೊಂಡು ಟಿಆರ್‌ಎಸ್ ಪಕ್ಷ ಈ ಹಾಡನ್ನು ರೂಪಿಸಿದೆ.