ನ್ಯೂಸ್

ಬಾಲಿವುಡ್​ನ ಪ್ರಸ್ತುತ ಸ್ಥಿತಿಯನ್ನು ರಾಹುಲ್​ ಗಾಂಧಿಗೆ ಹೋಲಿಸಿ ಸ್ವರಾ ಭಾಸ್ಕರ್​ ಕೊಟ್ಟ ವಿವರಣೆ ಹೀಗಿದೆ...

ಮುಂಬೈ: ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಧೈರ್ಯವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಕೆಲವೇ ಕೆಲವು ಸೆಲೆಬ್ರಿಟಿಗಳಲ್ಲಿ ಸ್ವರಾ ಭಾಸ್ಕರ್​ ಕೂಡ ಒಬ್ಬರು. ಸಾಕಷ್ಟು ವಿವಾದಗಳಿಂದಲೂ ಸ್ವರಾ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ಬಾಲಿವುಡ್​ನ ಪ್ರಸ್ತುತ ಸ್ಥಿತಿಯನ್ನು ಕಾಂಗ್ರೆಸ್​ ನಾಯಕ ಹಾಗೂ ವಯನಾಡು ಕ್ಷೇತ್ರದ ಸಂಸದ ರಾಹುಲ್​ ಗಾಂಧಿಗೆ ಹೋಲಿಕೆ ಮಾಡಿ ಭಾರಿ ಸುದ್ದಿಯಾಗಿದ್ದಾರೆ.

ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಸ್ವರಾಗೆ, ಬಾಲಿವುಡ್​ ಸಿನಿಮಾಗಳು ಇತ್ತೀಚೆಗೆ ಯಾಕೆ ಯಶಸ್ಸು ಗಳಿಸುತ್ತಿಲ್ಲ ಎಂದು ಪ್ರಶ್ನೆಸಿಲಾಯಿತು. ಇದಕ್ಕೆ ಉತ್ತರಿಸಿದ ಸ್ವರಾ, ದೇಶದಲ್ಲಿನ ಆರ್ಥಿಕ ಕುಸಿತವನ್ನು ಹೊಣೆ ಮಾಡಿ ಮಾಡಿದರು. ಥಿಯೇಟರ್‌ಗಳಲ್ಲಿ ಯಾವುದೇ ಪ್ರದರ್ಶನಗಳಿಲ್ಲದಿದ್ದಲ್ಲಿ ಬಾಲಿವುಡ್‌ನವರು ಹೊಣೆಯಾಗುತ್ತಾರೆ ಎಂಬುದು ಸುಳ್ಳಲ್ಲ ಎಂದರು. ಅಲ್ಲದೆ, ಒಟಿಟಿ ಅನ್ನು ದೂಷಿಸಿದ ಸ್ವರಾ, ಒಟಿಟಿ ಚಿತ್ರಮಂದಿಗಳಲ್ಲಿ ನೋಡುವ ಅನುಭವಕ್ಕೆ ಅಡ್ಡಿಯಾಗಿದೆ ಎಂದು ಹೇಳಿದರು.

ಬಾಲಿವುಡ್​ ಪ್ರಸ್ತುತ ಸ್ಥಿತಿಯನ್ನು ರಾಹುಲ್ ಗಾಂಧಿ ಅವರಿಗೆ ಹೋಲಿಸಿ ಸ್ವರಾ ಮಾತನಾಡಿದರು. ಇದೊಂದು ರೀತಿಯ ವಿಚಿತ್ರ ಹೋಲಿಕೆ ಎಂದು ನನಗೆ ಅನಿಸುವುದಿಲ್ಲ. ಆದರೆ, ನನಗೆ ರಾಹುಲ್ ಗಾಂಧಿಯವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಗುತ್ತದೆ. ಎಲ್ಲರು ಅವರನ್ನು ಪಪ್ಪು ಎಂದು ಕರೆಯುತ್ತಾರೆ. ಈಗ ಎಲ್ಲರು ಅದನ್ನೇ ನಂಬಿದ್ದಾರೆ. ನಾನು ಅವರನ್ನು ಭೇಟಿಯಾಗಿದ್ದೇನೆ ಮತ್ತು ಅವರೊಬ್ಬ ಸಂಪೂರ್ಣ ಬುದ್ಧಿವಂತ ಹಾಗೂ ಸ್ಪಷ್ಟ ಮನುಷ್ಯ. ರಾಹುಲ್​ ಅವರನ್ನು ಪಪ್ಪು ಎಂದು ಹೇಗೆ ಬಿಂಬಿಸಲಾಗಿದೆಯೋ ಅದೇ ರೀತಿ ಬಾಲಿವುಡ್‌ನಲ್ಲೂ ಈ 'ಪಪ್ಪುಫಿಕೇಶನ್' ನಡೆದಿದೆ ಎಂದು ಆರೋಪಿಸಿದರು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಕೊನೆಯದಾಗಿ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಸ್ವರಾ ಅವರ ಸಿನಿಮಾ ವೀರ್​ ದಿ ವೆಡ್ಡಿಂಗ್​. ತುಂಬಾ ದಿನಗಳ ಬಳಿಕ ಅವರ ಹೊಸ ಸಿನಿಮಾ "ಜಹಾನ್​ ಚಾರ್​ ಯಾರ್​" ಸೆಪ್ಟೆಂಬರ್​ 16ಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಆಗಸ್ಟ್​ 22ರಂದು ಟ್ರೈಲರ್​ ಬಿಡುಗಡೆಯಾಗಿದ್ದು, ತಕ್ಕಮಟ್ಟಿಗೆ ಗಮನ ಸೆಳೆಯುತ್ತಿದೆ. (ಏಜೆನ್ಸೀಸ್​)