ನ್ಯೂಸ್

ಸ್ವಿಮ್ಮಿಂಗ್​ ಪೂಲ್​ ಒಳಗೆ ನೂಕಿದ ಮ್ಯಾನೇಜರ್​ಗೆ ಚಪ್ಪಲಿ ಏಟು ಕೊಟ್ಟ ನಟಿ ಸನ್ನಿ ಲಿಯೋನ್​! ವಿಡಿಯೋ ವೈರಲ್​

ಮುಂಬೈ: ಬಾಲಿವುಡ್​ ನಟಿ ಹಾಗೂ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ತಮ್ಮ ಮ್ಯಾನೇಜರ್​ ಮೇಲೆ ಕೋಪಗೊಂಡು ಚಪ್ಪಲಿ ಸೇವೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಮ್ಯಾನೇಜರ್​ಗೆ ಚಪ್ಪಲಿಯಲ್ಲಿ ಹೊಡೆಯುವ ವಿಡಿಯೋವನ್ನು ಸನ್ನಿ ಲಿಯೋನ್​ ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಿದ್ದು, ನನ್ನ ಸೇಡು ತೀರಿಸಿಕೊಂಡೆ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, 3 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಗಿಟ್ಟಿಸಿಕೊಂಡಿದೆ.

ವಿಡಿಯೋದಲ್ಲಿ ಏನಿದೆ? ಸನ್ನಿ ಸ್ವಿಮ್ಮಿಂಗ್​ ಪೂಲ್​ನ ಅಂಚಿನಲ್ಲಿ ನಡೆದುಕೊಂಡು ಬರುತ್ತಿರುತ್ತಾರೆ. ಅವರ ಹಿಂದೆ ಅಂಗರಕ್ಷಕರ ಕೊಡೆ ಹಿಡಿದು ಬರುತ್ತಿರುತ್ತಾರೆ. ಈ ವೇಳೆ ದಿಢೀರನೇ ಎಂಟ್ರಿ ಕೊಡುವ ಮ್ಯಾನೇಜರ್​, ಸನ್ನಿ ಅವರನ್ನು ಸ್ವಿಮ್ಮಿಂಗ್​ ಪೂಲ್​ ಒಳಗೆ ನೂಕುತ್ತಾರೆ. ನೀರಿನ ಒಳಗೆ ಬೀಳುವ ಸನ್ನಿ ಕೋಪಗೊಂಡು ತಮ್ಮ ಚಪ್ಪಲಿಗಳನ್ನು ತೆಗೆದುಕೊಂಡು ಮ್ಯಾನೇಜರ್​ಗೆ ಬಾರಿಸುತ್ತಾರೆ. ಈ ವೇಳೆ ಅಲ್ಲಿದ್ದವರು ಸನ್ನಿ ನೋಡಿ ನಗುತ್ತಿರುತ್ತಾರೆ.

​ ಸನ್ನಿ ಮಾಡಿರುವ ಪೋಸ್ಟ್‌ನ ಕೆಳಗೆ ಹಲವಾರು ಅಭಿಮಾನಿಗಳು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನಟಿಯ ಸೇಡು ತೀರಾ ಕಡಿಮೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸನ್ನಿ ಲಿಯೋನ್ ತನ್ನ ಉದ್ಯೋಗಿಗಳ ಬಗ್ಗೆ ತುಂಬಾ ಪ್ರೀತಿಯಿಂದ ಇರುತ್ತಾಳೆ ಎಂಬುದನ್ನು ಈ ವೀಡಿಯೊ ಸಾಬೀತುಪಡಿಸುತ್ತದೆ ಎಂದು ಅವರ ಅಭಿಮಾನಿಗಳು ಹೇಳಿದ್ದಾರೆ. ಸದ್ಯ ವಿಡಿಯೋ ವೈರಲ್​ ಆಗಿದ್ದು, ನಿಮಗೆ ಏನು ಅನಿಸುತ್ತದೆ ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)