ನ್ಯೂಸ್

VIDEO| ಪುಷ್ಪ ಚಿತ್ರದ ಡಿಲಿಟೆಡ್​ ದೃಶ್ಯ ಬಿಡುಗಡೆ ಮಾಡಿದ ಚಿತ್ರತಂಡ

ಹೈದರಾಬಾದ್​: ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ ನಟನೆಯ ಪುಷ್ಪ ಚಿತ್ರ ಬಾಕ್ಸ್​ಆಫೀಸ್​ ಹಿಟ್​ ಎಂದು ಘೋಷಿಸಲಾಗಿದೆ. ಗಲ್ಲಾಪಟ್ಟಿಗೆಯಲ್ಲಿ ಧೂಳೆಬ್ಬಿಸಿ, ಪುಷ್ಪ ತನ್ನ ಓಟವನ್ನು ಮುಂದುವರಿಸಿದೆ. ಇದರ ನಡುವೆ ಚಿತ್ರದ ಡಿಲಿಟ್​ ಮಾಡಲಾಗಿದ್ದ ದೃಶ್ಯವೊಂದು ಯೂಟ್ಯೂಬ್​ನಲ್ಲಿ ವೈರಲ್​​ ಆಗಿದೆ.

ಡಿಲೀಟ್​ ಮಾಡಿದ್ದ ದೃಶ್ಯವನ್ನು ಚಿತ್ರತಂಡವೇ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಸಾಲ ತೀರಿಸಿಲ್ಲ ಅಂತಾ ಸಾಲ ನೀಡಿದವನು ಪುಷ್ಪ ತಾಯಿಯನ್ನು ನಿಂದಿಸುತ್ತಾನೆ. ಇದರಿಂದ ನೊಂದುಕೊಳ್ಳುವ ಪುಷ್ಪ, ತನ್ನ ತಾಯಿಯ ಸಾಲವನ್ನು ತೀರಿಸುತ್ತಾನೆ. ಬಳಿಕ ಸಾಲ ತೀರಿಸಿದ್ದಾರೆ ಎಂದು ಊರಿನ ಎಲ್ಲರಿಗೂ ಹೇಳಿಕೊಂಡು ಬರುವಂತೆ ಸಾಲ ನೀಡಿದವನನ್ನು ಒತ್ತಾಯಿಸುತ್ತಾನೆ. ಸಾಲಗಾರರಿಂದ ಉಂಟಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಹೀಗೆ ಮಾಡುತ್ತಾನೆ.

ಇನ್ನು ನಾಯಕಿ ರಶ್ಮಿಕಾ ಮಂದಣ್ಣ ಅವರ ಎದೆಯನ್ನು ನಾಯಕ ಅಲ್ಲು ಅರ್ಜುನ್​ ಸ್ಪರ್ಶಿಸುವ ದೃಶ್ಯವನ್ನು ಕೂಡ ಚಿತ್ರದಲ್ಲಿ ಡಿಲೀಟ್​ ಮಾಡಲಾಗಿದೆ ಎಂಬ ವಿಚಾರ ಈ ಹಿಂದೆಯೇ ಬೆಳಕಿಗೆ ಬಂದಿತ್ತು. ಫ್ಯಾಮಿಲಿ ಆಡಿಯನ್ಸ್​ಗೆ ಮುಜುಗರ ಆಗಬಹುದು ಎಂಬ ಕಾರಣಕ್ಕೆ ಆ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ ಎಂದು ಹೇಳಲಾಗಿದೆ.

ಇನ್ನು ಪುಷ್ಪ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ 300 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರತಂಡವೂ ಕೂಡ ಹೇಳಿಕೊಂಡಿದೆ. ಚಿತ್ರದ ಬಗ್ಗೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ಬಂದಿತ್ತು. ಆದರೂ ಚಿತ್ರ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. (ಏಜೆನ್ಸೀಸ್​)