ಲಖನೌ: ಪುಟ್ಟ ಮಕ್ಕಳನ್ನು ಕರೆದುಕೊಂಡು ರೈಲುಗಳಲ್ಲಿ ಸಂಚರಿಸುವ ಪೋಷಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದ್ದು, ಇನ್ನು ಮುಂದೆ ರೈಲುಗಳಲ್ಲಿ ಮಕ್ಕಳಿಗಾಗಿ 'ಬೇಬಿ ಬರ್ತ್' ಇರಲಿವೆ.
ಆರಂಭಿಕ ಹಂತದಲ್ಲಿ ಲಖನೌ ಮೇಲ್ ರೈಲುಗಳ ಲೋವರ್ ಬರ್ತ್ ಗಳಿಗೆ ಬೇಬಿ ಬರ್ತ್ ಗಳನ್ನು ಅಳವಡಿಸಲಾಗಿದೆ. ಹಸುಗೂಸುಗಳನ್ನು ಕರೆದುಕೊಂಡು ಸಂಚರಿಸುವ ಹೆಣ್ಣುಮಕ್ಕಳಿಗೆ ಭಾರಿ ಅನುಕೂಲವಾಗಲಿದೆ.
770 ಮಿ.ಮೀ ಉದ್ದ, 255 ಮಿ.ಮೀ ಅಗಲ ಹಾಗೂ 76.2 ಮಿ.ಮೀ ಎತ್ತರದ ಬೇಬಿ ಬರ್ತ್ಗಳನ್ನು ಅಳವಡಿಸಲಾಗಿದೆ. ಈ ಹೊಸ ಸೌಲಭ್ಯವನ್ನು ಪರಿಚಯಿಸಿದ ನಂತರ, ಹಾಲುಣಿಸುವ ಶಿಶುವಿನೊಂದಿಗೆ ಪ್ರಯಾಣಿಸುವ ಮಹಿಳೆಯರು ನಿರಾಳವಾಗುತ್ತಾರೆ ಎಂದು ರೈಲ್ವೆ ಇಲಾಖೆ ಕೂ ಮಾಡಿದೆ.