ಹೈದರಾಬಾದ್: ಟಾಲಿವುಡ್ ಸಿನಿಮಾ 'ಪುಷ್ಪ: ದಿ ರೈಸ್' ಸೂಪರ್ ಹಿಟ್ ಆಗಿ ಹೊರಹೊಮ್ಮಿದೆ ಮತ್ತು ಅದರ ಡೈಲಾಗ್‌ಗಳು ಹಾಗೂ ಸಿಗ್ನೇಚರ್ ಸ್ಟೆಪ್ಸ್ ಈಗಲೂ ಕೂಡ ಆನ್‌ಲೈನ್‌ನಲ್ಲಿ ಟ್ರೆಂಡಿಂಗ್ನಲ್ಲಿವೆ. ಅದರಲ್ಲೂ ಅಲ್ಲು ಅರ್ಜುನ್ ಅವರ ತಗ್ಗೆದೆಲೆ ಡೈಲಾಗ್ ಮಾತ್ರ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ. ಪ್ರಪಂಚದಾದ್ಯಂತದ ಜನರು ಅದರ ಅನುಸರಣೆಯನ್ನು ಮಾಡಿದ್ದಾರೆ.
ತೆಗ್ಗೆದೆಲೆ ಡೈಲಾಗ್ ಮೇಲಿನ ಸಾಕಷ್ಟ ರೀಲ್ಸ್ ಕೂಡ ವೈರಲ್ ಆಗಿವೆ. ಯುವಕರಿಂದ ಹಿಡಿದು ವಯಸ್ಸಾದ ನಾಗರಿಕರು ಕೂಡ ತೆಗ್ಗೆದೆಲೆ ಡೈಲಾಗ್ ಹೊಡೆದು ಸಿಗ್ನೆಚರ್ ಸ್ಟೈಲ್ ಕಾಪಿ ಮಾಡಿರುವುದನ್ನು ನಾವೆಲ್ಲ ನೋಡಿದ್ದೇವೆ. ಇದೀಗ ನವಜಾತ ಶಿಶುವೊಂದು ಅದೇ ಸಿಗ್ನೇಚರ್ ಸ್ಟೈಲ್ ಕಾಪಿ ಮಾಡಿ ಎಲ್ಲರ ಹುಬ್ಬೇರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಮಗುವಿನ ವಿಡಿಯೋವನ್ನು ಐಎಎಸ್ ಅಧಿಖಾರಿ ಅವನೀಶ್ ಶರಣ್ ಅವರು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಈಗಾಗಲೇ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದವರು ಫಿದಾ ಆಗಿದ್ದು, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)