ಮುಂಬೈ: ಆನಂದ್ ಎಲ್ ರೈ ಅವರು 'ತನು ವೆಡ್ಸ್ ಮನು 3' ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಸಿನಿಮಾದ ಮೊದಲ ಮತ್ತು ಎರಡನೇ ಭಾಗದಲ್ಲಿ ನಟ ಮಾಧವನ್ ಕಾಣಿಸಿಕೊಂಡಿದ್ದಾರೆ. 'ತನು ವೆಡ್ಸ್ ಮನು 3' ರಲ್ಲಿ ನಟ ಆರ್.ಮಾಧವನ್(R Madhavan) ಅವರು ನಟಿಸಲಿದ್ದಾರೆಯೇ ಎಂಬುದು ಹಲವರ ಪ್ರಶ್ನೆಯಾಗಿತ್ತು. ಈಗ ಅದಕ್ಕೆ ಸ್ವತಃ ಮಾಧವನ್ ಅವರೇ ಉತ್ತರಿಸಿದ್ದಾರೆ.
ಇದನ್ನು ಓದಿ: 'SSMB29'ನಲ್ಲಿ ಮಹೇಶ್ ಬಾಬುಗೆ ಜೋಡಿ ಈ ಹಾಲಿವುಡ್ ನಟಿ?; ಹೈದರಾಬಾದ್ ಏರ್ಪೋರ್ಟ್ಗೆ ಬಂದಿಳಿದ ಬೆಡಗಿ ಇವರೇ..
ಆರ್.ಮಾಧವನ್ ಪ್ರಸ್ತುತ ಅವರ ಹೊಸ ಚಿತ್ರ 'ಹಿಸಾಬ್ ಬರಾಬರ್' ವಿಚಾರವಾಗಿ ಬಿಸಿ ಇದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. 'ತನು ವೆಡ್ಸ್ ಮನು 3'ನಲ್ಲಿ ಕಂಗನಾ ಅವರೊಂದಿಗೆ ತ್ರಿಪಾತ್ರದಲ್ಲಿ ನಟಿಸುತ್ತಿದ್ದಾರೆಯೇ ಎಂದು ಮಾಧವನ್ ಅವರನ್ನು ಕೇಳಿದಾಗ, ನಾನು ಅದರ ಬಗ್ಗೆ ಮಾತನಾಡಲು ಬಯಸುತ್ತೇನೆ. ಆದರೆ ನನಗೆ ನಿಜವಾಗಿಯೂ ತಿಳಿದಿಲ್ಲ ಎಂದು ಹೇಳಿದರು.
ನನಗೂ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿಯೂ ಹಾಗೂ ಮಾಧ್ಯಮಗಳು, ಜನರು ಈ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸಿನಿಮಾ ತೃತೀಯ ಭಾಗದ ಬಗ್ಗೆ ಆನಂದ್ ಆಗಲಿ ಅಥವಾ ಬೇರೆಯವರಾಗಲಿ ನನ್ನೊಂದಿಗೆ ಮಾತನಾಡಿಲ್ಲ. ನನಗೆ ಯಾವುದೇ ಕಲ್ಪನೆ ಇಲ್ಲ. ಸ್ಕ್ರಿಪ್ಟ್ ಏನೆಂದು ನನಗೆ ಗೊತ್ತಿಲ್ಲ. ಬಹುಶಃ ನಾನು ಅದರಲ್ಲಿ ಇಲ್ಲ ಎನ್ನಿಸುತ್ತದೆ. ಬಹುಶಃ ಅವರು ನನ್ನನ್ನು ಬದಲಾಯಿಸಿರಬೇಕು ಎಂದು ಹೇಳಿದರು.
ಆನಂದ್ ಎಲ್ ರೈ ಅವರ 'ತನು ವೆಡ್ಸ್ ಮನು' 2011ರಲ್ಲಿ ಹಾಗೂ ಎರಡನೇ ಭಾಗವು 2015ರಲ್ಲಿ ಬಿಡುಗಡೆಯಾಯಿತು. ಈ ಎರಡೂ ಹಿಟ್ ಆಗಿತ್ತು. ಅಂದಿನಿಂದ ಅಭಿಮಾನಿಗಳು ಮೂರನೇ ಭಾಗ ಅಂದರೆ 'ತನು ವೆಡ್ಸ್ ಮನು 3' ಗಾಗಿ ಕಾಯುತ್ತಿದ್ದಾರೆ. ಚಿತ್ರದಲ್ಲಿ ಆರ್. ಮಾಧವನ್ ಮತ್ತು ಕಂಗನಾ ರಣಾವತ್ ಹೊರತುಪಡಿಸಿ ಜಿಮ್ಮಿ ಶೆರ್ಗಿಲ್, ದೀಪಕ್ ಡೊಬ್ರಿಯಾಲ್, ಸ್ವರಾ ಭಾಸ್ಕರ್ ಮತ್ತು ಎಜಾಜ್ ಖಾನ್ ಇದ್ದರು.(ಏಜೆನ್ಸೀಸ್)