ಚೆನ್ನೈ: ಫೈವ್ ಸ್ಟಾರ್ ಹೋಟೆಲ್ಗಳು ಮತ್ತು ಶ್ರೀಮಂತರಿಗೆ ಸಂಬಂಧಿಸಿದ ಐಷಾರಾಮಿ ಮನೆಗಳಲ್ಲಿ ರೇವ್ ಪಾರ್ಟಿಗಳು ನಡೆಯುವುದು ಸಾಮಾನ್ಯ. ಆದರೆ, ಕರೊನಾ ವೈರಲ್ ಸಾಂಕ್ರಮಿಕದಿಂದಾಗಿ ಒಟ್ಟಾಗಿ ಸೇರುವುದನ್ನು ಎಲ್ಲೆಡೆ ನಿರ್ಬಂಧಿಸಲಾಗಿದೆ. ಆದರೂ, ಕೆಲವೆಡೆ ಗುಟ್ಟಾಗಿ ರೇವ್ ಪಾರ್ಟಿಗಳನ್ನು ನಡೆಸುತ್ತಿರುವುದು ಬೆಳಕಿಗೆ ಬರುತ್ತಲೇ ಇದೆ.
ಇದೀಗ ಚೆನ್ನೈನಲ್ಲಿ ನಟಿಯೊಬ್ಬರನ್ನು ಇದೇ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಕಣ್ಣತ್ತೂರ್ ಏರಿಯಾದ ಐಷಾರಾಮಿ ಬಂಗಲೆಯಲ್ಲಿ ರೇವ್ ಪಾರ್ಟಿ ನಡೆಯುತ್ತಿರುವ ಸುಳಿವು ಪಡೆದು ದಾಳಿ ನಡೆಸಿದ ಚೆನ್ನೈ ಪೊಲೀಸರು ನಟಿಯನ್ನು ಸೋಮವಾರ ಬಂಧಿಸಿದ್ದಾರೆ.
ಅರೆಬೆತ್ತಲೆ ನೃತ್ಯ ಹಾಗೂ ದುಬಾರಿ ಆಲ್ಕೋಹಾಲ್ನೊಂದಿಗೆ 15 ಮಹಿಳೆಯರು ಮತ್ತು ಅದೇ ಸಂಖ್ಯೆಯ ಪುರುಷರು ಎಂಜಾಯ್ ಮಾಡುತ್ತಿದ್ದರು ಎಂಬುದು ದಾಳಿಯ ವೇಳೆ ಬಹಿರಂಗವಾಗಿದೆ.
ಪಾರ್ಟಿ ನಡೆಯುತ್ತಿದ್ದ ಬಂಗಲೆಯನ್ನು ನಟಿ ಕವಿತಾಶ್ರೀ ಅವರು ಬಾಡಿಗೆ ಪಡೆದಿದ್ದಾರೆಂದು ತಿಳಿದುಬಂದಿದೆ. ಬಂಗಲೆಗಳನ್ನು ಬಾಡಿಗೆ ಪಡೆದು ಪ್ರತಿ ರಾತ್ರಿ ರೇವ್ ಪಾರ್ಟಿ ನಡೆಸುತ್ತಿದ್ದರು ಎಂಬ ಆರೋಪವಿದೆ. ಪಾರ್ಟಿಗಳಿಗೆ ಮಹಿಳೆಯರಿಗೆ ಉಚಿವ ಪ್ರವೇಶವನ್ನು ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಸದ್ಯ ನಟಿಯನ್ನು ಬಂಧಿಸಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಕವಿತಾಶ್ರೀ ಅವರು ಅನೇಕ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಮತ್ತು ಪ್ರಭುದೇವ್ ಅಭಿನಯದ ಕಾದಲನ್ ಚಿತ್ರದಲ್ಲಿ ಕವಿತಾಶ್ರೀ ಅವರು ನಟಿಸಿದ್ದಾರೆ. (ಏಜೆನ್ಸೀಸ್)