ನ್ಯೂಸ್

ರಾಜ್ಯದಲ್ಲಿ 2ನೇ ದಿನದ ಭಾರತ್ ಜೋಡೋ ಯಾತ್ರೆ ಆರಂಭ: ಮಳೆಯಿಂದಾಗಿ ತಡವಾಗಿ ಶುರು, ಯಾತ್ರೆಯಲ್ಲೂ ಎರಡು ಬಣ

ಚಾಮರಾಜನಗರ/ಮೈಸೂರು: ಕಾಂಗ್ರೆಸ್​ ನಡೆಸುತ್ತಿರುವ ಭಾರತ್​ ಜೋಡೋ ಪಾದಯಾತ್ರೆ ರಾಜ್ಯದಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬೆಳ್ಳಂಬೆಳಗ್ಗೆ ಮಳೆರಾಯನ ಆಗಮನದಿಂದಾಗಿ ಪಾದಯಾತ್ರೆ ತಡವಾಗಿ ಆರಂಭವಾಗಿದ್ದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗ್ರಾಮದಿಂದ ಕಾಂಗ್ರೆಸ್​ ನಾಯಕ ಹಾಗೂ ವಯನಾಡು ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಎರಡನೇ ದಿನದ ಪಾದಯಾತ್ರೆ ಆರಂಭವಾಗಿದೆ.

ಜೋಡೋ ಯಾತ್ರೆ ನಿನ್ನೆ ಕೇರಳದಿಂದ ಕರ್ನಾಟಕವನ್ನು ಪ್ರವೇಶಿಸಿತು. ರಾಹುಲ್​ ಗಾಂಧಿ ರಾತ್ರಿ ಬೇಗೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿಂದತೆ ಸಾಕಷ್ಟು ಕೈ ನಾಯಕರು ರಾಹುಲ್​ಗೆ ಪಾದಯಾತ್ರೆ ಸಮಯದಲ್ಲಿ ಸಾಥ್ ನೀಡಿದರು.

ಇಂದು ಚಾಮರಾಜನಗರ ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ಪಾದಯಾತ್ರೆ ಎಂಟ್ರಿಯಾಗಿದೆ. ಪಾದಯಾತ್ರೆ ಮೈಸೂರು ಜಿಲ್ಲೆಯ ಗಡಿ ಪ್ರವೇಶಿಸುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಮಂದಿ ಅದ್ಧೂರಿ ಸ್ವಾಗತ ಕೋರಿದರು. ವಿವಿಧ ಕಲಾ ತಂಡಗಳು ಪಾದಯಾತ್ರೆಯ ಮೆರುಗು ಹೆಚ್ಚಿಸಿದ್ದವು. ಪಾದಯಾತ್ರೆ ನಡುವೆ ನಂಜನಗೂಡು ತಾಲೂಕಿನ ಕಳಲೆ ಗೇಟ್ ಬಳಿ ನಾಯಕರು ವಿಶ್ರಾಂತಿ ಪಡೆಯಲಿದ್ದಾರೆ. ಮತ್ತೆ ಸಂಜೆ 4 ಗಂಟೆಗೆ ಪಾದಯಾತ್ರೆ ಆರಂಭವಾಗಲಿದ್ದು, ರಾತ್ರಿ 7 ಗಂಟೆಗೆ ನಂಜನಗೂಡು ತಾಲೂಕಿನ ತಾಂಡವಪುರದಲ್ಲಿ ಇಂದಿನ ಪಾದಯಾತ್ರೆ ಮುಕ್ತಾಯವಾಗಲಿದೆ.

ಪಾದಯಾತ್ರೆಯಲ್ಲೂ ಎರಡು ಬಣ

ಡಿ.ಕೆ. ಶಿವಕುಮಾರ್​ ಜತೆ ಹೆಜ್ಜೆ ಕೆಪಿಸಿಸಿ ಕಾರ್ಯಾಧ್ಯಕ್ಣ ಧೃವನಾರಾಯಣ್ ಹೆಜ್ಜೆ ಹಾಕಿದರೆ, ಮಾಜಿ ಸಿಎಂ ಸಿದ್ದರಾಮಯ್ಯನವರ ಜೊತೆ ಶಾಸಕ ಯತೀಂದ್ರ ಸಿದ್ದರಾಮಯ್ಯ, ಡಾ.ಎಚ್.ಸಿ ಮಹದೇವಪ್ಪ ಹೆಜ್ಜೆ ಹಾಕಿದರು. ಪಾದಯಾತ್ರೆ ವೇಳೆ ಡಿಕೆಶಿ ಜೊತೆ ರಾಹುಲ್ ಮಾತುಕತೆ ನಡೆಸುತ್ತಿದ್ದು, ಸಿದ್ದರಾಮಯ್ಯನವರು ಅಂತರ ಕಾಯ್ದುಕೊಂಡ ಪಾದಯಾತ್ರೆ ನಡೆಸುತ್ತಿದ್ದಾರೆ.