ಹೈದರಾಬಾದ್: ಪಾನಮತ್ತ ಯುವಕನೊಬ್ಬ ಟ್ರಾಫಿಕ್ ಪೊಲೀಸರು ಮೇಲೆ ಕಲ್ಲು ಮತ್ತು ಇಟ್ಟಿಗೆಯಿಂದ ದಾಳಿ ಮಾಡಿರುವ ಘಟನೆ ಹೈದರಾಬಾದ್ನ ಜೀಡಿಮೆಟ್ಲಾ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಪೊಲೀಸರು ರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಣ ಮಾಡುವಾಗ ಮಧ್ಯ ಪ್ರವೇಶಿಸಿದ ಪಾನಮತ್ತ ಯುವಕ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವೇ ಇಲ್ಲದೆ, ಸ್ಥಳದಲ್ಲಿ ಸಿಕ್ಕ ಕಲ್ಲು ಮತ್ತು ಇಟ್ಟಿಗೆಗಳಿಂದ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಾರೆ.
ಸ್ವಲ್ಪ ಸಮಯದ ಬಳಿಕ ಕೆಲವು ಜನರ ಸಹಾಯದಿಂದ ಹೇಗೋ ಯುವಕನನ್ನು ನಿಯಂತ್ರಿಸಿದ ಪೊಲೀಸರು, ಕೈಕಾಲು ಕಟ್ಟಿಕೊಂಡು ಠಾಣೆಗೆ ಹೊತ್ತೊಯ್ದರು. ತೀವ್ರ ಪಾನಮತ್ತನಾಗಿದ್ದ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. (ಏಜೆನ್ಸೀಸ್)