ನ್ಯೂಸ್

ಸೈಕಲ್​ ತುಳಿಯುತ್ತಲೇ ಕೆಳಗೆ ಬಿದ್ದ ಗೋರಿಲ್ಲಾಗೆ ಬಂತು ಎಲ್ಲಿಲ್ಲದ ಕೋಪ: ಮುಂದೇನಾಯ್ತು ನೀವೇ ನೋಡಿ...

ನವದೆಹಲಿ: ಎಂದಾದರೂ ನೀವು ಗೋರಿಲ್ಲಾ ಸೈಕಲ್​ ತುಳಿಯುವುದನ್ನು ನೋಡಿದ್ದೀರಾ? ನೋಡಿಲ್ಲ ಅಂದ್ರೆ ಇಲ್ಲಿದೆ ನೋಡಿ. ಗೊರಿಲ್ಲಾ ಒಂದು ಸೈಕಲ್​ ತುಳಿಯುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಐಎಫ್​ಎಸ್​ ಅಧಿಕಾರಿ ಸಾಮ್ರಾಟ್​ ಗೌಡ ಎಂಬುವರು ಬುಧವಾರ ತಮ್ಮ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಸೈಕಲ್​​ ತುಳಿಯುತ್ತಲೇ ನಿಯಂತ್ರಣ ಕಳೆದುಕೊಂಡು ಕೆಳಗೆ ಬೀಳುವ ಗೋರಿಲ್ಲಾ, ಕೋಪದಿಂದ ಸೈಕಲ್​ ಸಹವಾಸವೇ ಬೇಡ ಅಂತಾ ದೂರ ಎಸೆಯುವುದು ವಿಡಿಯೋದಲ್ಲಿದೆ.

ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಗೊರಿಲ್ಲಾ ಸೈಕಲ್​ ತುಳಿಯುವ ಸ್ಟೈಲ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸಾಮ್ರಾಟ್​ ಗೌಡ್​ ಶೇರ್​ ಮಾಡಿರುವ ವಿಡಿಯೋ ಈಗಾಗಲೇ 69 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. 3 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿವೆ. ಈ ವಿಡಿಯೋ ಮೂಲ ಎಲ್ಲಿಯದು ಎಂಬುದು ತಿಳಿದುಬಂದಿಲ್ಲ. ಆದರೆ ವಿಡಿಯೋ ಮಾತ್ರ ನೆಟ್ಟಿಗರ ಮನ ಗೆದ್ದಿದೆ. (ಏಜೆನ್ಸೀಸ್​)