ನ್ಯೂಸ್

VIDEO| ಮನೆ ಒಡತಿಯ ಹುಟ್ಟುಹಬ್ಬಕ್ಕೆ ಶುಭಕೋರಿದ ಶ್ವಾನ: ನಿಮ್ಮ ಹೃದಯ ಗೆಲ್ಲುವ ವಿಡಿಯೋ ಇದು

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಆದರೆ, ಕೆಲವೇ ಕೆಲವು ವಿಡಿಯೋಗಳು ಮಾತ್ರ ಎಲ್ಲರ ಗಮನ ಸೆಳೆಯುತ್ತವೆ. ಆ ಸಾಲಿಗೆ ಶ್ವಾನಗಳ ಕ್ಯೂಟ್​ ವಿಡಿಯೋಗಳು ಕೂಡ ಸೇರಿಕೊಳ್ಳುತ್ತವೆ. ಶ್ವಾನದ ತುಂಟಾಟ ಹಾಗೂ ತನ್ನ ಮಾಲೀಕನಿಗೆ ತೋರುವ ನಿಯತ್ತಿನ ವಿಡಿಯೋಗಳಂತೂ ಲೆಕ್ಕವಿಲ್ಲದಷ್ಟು ಜಾಲತಾಣದಲ್ಲಿ ಹರಿದಾಡಿವೆ. ಇದೀಗ ಶ್ವಾನಕ್ಕೆ ಸಂಬಂಧಿಸಿದ ಮತ್ತೊಂದು ವಿಡಿಯೋ ವೈರಲ್​ ಆಗಿದ್ದು, ಅದನ್ನು ನೋಡಿದರೆ ಶ್ವಾನದ ಮೇಲಿನ ನಿಮ್ಮ ಪ್ರೀತಿ ಹೆಚ್ಚಾಗದೇ ಇರದು.

ಅರುಣಿಮಾ ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಲಾಗಿದೆ. ಅರುಣಿಮಾ ಅವರ ತಾಯಿಯ ಬರ್ತಡೇ ಆಚರಣೆಯ ವಿಡಿಯೋ ಇದಾಗಿದೆ. ಆದರೆ, ಸ್ಥಳದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಕೇವಲ 19 ಸೆಕೆಂಡಿನ ವಿಡಿಯೋ ಇದಾಗಿದೆ.

ವಿಡಿಯೋದಲ್ಲಿ ಏನಿದೆ? ಅರುಣಿಮಾ ಅವರ ತಾಯಿಯು ಬರ್ತಡೇ ಕೇಕ್​ ಕತ್ತರಿಸುವ ಮುನ್ನ ಮಾಮೂಲಿಯಂತೆ ಕ್ಯಾಂಡಲ್ ದೀಪವನ್ನು ಹಾರಿಸುತ್ತಾರೆ. ಈ ವೇಳೆ ಅಲ್ಲಿದ್ದ ಜನರೆಲ್ಲ ಚಪ್ಪಾಳೆ ತಟ್ಟಿ ಬರ್ತಡೇ ವಿಶ್​ ಮಾಡುತ್ತಾರೆ. ಅದನ್ನು ಕುತೂಹಲದಿಂದ ನೋಡುತ್ತಿದ್ದ ಶ್ವಾನವೂ ಕೂಡ ತನ್ನ ಕಾಲುಗಳನ್ನು ಮೇಲೆತ್ತಿ ಚಪ್ಪಾಳೆ ತಟ್ಟಿ ಖುಷಿಯಿಂದ ಶುಭಕೋರುತ್ತದೆ.

ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿದ್ದು, ನೆಟ್ಟಿಗರ ಹೃದಯವನ್ನು ಗೆದ್ದಿದೆ. ಈಗಾಗಲೇ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ವಿಡಿಯೋ ಗಿಟ್ಟಿಸಿಕೊಂಡಿದೆ. ಸಾಕಷ್ಟು ಮಂದಿ ನಾಯಿಯನ್ನು ಮೆಚ್ಚಿ, ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. (ಏಜೆನ್ಸೀಸ್​)