More

    ಹೊಸ ಕಾರುಗಳಿಗೆ ಕಾಯುತ್ತಿರುವ ಗ್ರಾಹಕರು!; 7 ಲಕ್ಷಕ್ಕೂ ಹೆಚ್ಚು ಕಾರುಗಳ ಹಸ್ತಾಂತರ ಬಾಕಿ ಸೆಮಿಕಂಡಕ್ಟರ್ ಚಿಪ್ ಕೊರತೆ ಕಾರಣ

    ನವದೆಹಲಿ: ದೇಶದಲ್ಲಿ ಹೊಸ ಕಾರು ಖರೀದಿಗಾಗಿ ಮುಂಗಡ ಹಣ ಕೊಟ್ಟು 7 ಲಕ್ಷಕ್ಕೂ ಹೆಚ್ಚು ಗ್ರಾಹಕರು ಕಾಯುತ್ತಿದ್ದಾರೆ. ಕೆಲವರು ತಿಂಗಳುಗಳಿಂದ ಕಾಯುತ್ತಿದ್ದರೆ ಹಲವರು ವರ್ಷದಿಂದ ಕಾಯುತ್ತಿದ್ದಾರೆ! ಆಧುನಿಕ ಕಾರುಗಳ ವೈವಿಧ್ಯಮಯ ಕೆಲಸಗಳನ್ನು ನಿರ್ವಹಿಸುವುದಕ್ಕೆ ಸೆಮಿಕಂಡಕ್ಟರ್ ಚಿಪ್​ಗಳು ಬೇಕು. ಹೀಗಾಗಿ ಚಿಪ್ ಕೊರತೆ ಸಮಸ್ಯೆ ಜಗತ್ತಿನ ಆಟೊ ಮೊಬೈಲ್ ಕ್ಷೇತ್ರವನ್ನು ಬಹುವಾಗಿ ಕಾಡಿದೆ. ಭಾರತದಲ್ಲಿ ಬಜಾಜ್ ಆಟೋ, ಮಹಿಂದ್ರಾ ಆಂಡ್ ಮಹಿಂದ್ರಾ, ಟಾಟಾ ಮೋಟಾರ್ಸ್, ಟಿವಿಎಸ್ ಮೋಟಾರ್ಸ್ ಸೇರಿ ಬಹುತೇಕ ಪ್ರಾದೇಶಿಕ ವಾಹನ ಉತ್ಪಾದಕ ಸಂಸ್ಥೆಗಳಿಗೆ ಚಿಪ್ ಕೊರತೆಯ ಬಿಸಿ ತಟ್ಟಿದೆ. ಕಾರು ಉತ್ಪಾದನೆ ಕುಂಟಿತವಾಗಿದ್ದು, ಗ್ರಾಹಕರ ಬೇಡಿಕೆ ಈಡೇರಿಸಲಾಗುತ್ತಿಲ್ಲ. ಮಾರ್ಚ್ ತಿಂಗಳ ಲೆಕ್ಕಾಚಾರ ಪ್ರಕಾರ 5 ಲಕ್ಷಕ್ಕೂ ಹೆಚ್ಚು ಗ್ರಾಹಕರು ಹೊಸ ಕಾರು ಖರೀದಿಗೆ ಮುಂಗಡ ಹಣ ನೀಡಿ ಕಾಯುತ್ತಿದ್ದರು. ಈಗ ಇದು 7 ಲಕ್ಷಕ್ಕೆ ಏರಿದೆ. ಮಹಿಂದ್ರಾ ಎಕ್ಸ್​ಯುವಿ700 ಎಸ್​ಯುುವಿ, ಮಾರುತಿಯ ಸಿಎನ್​ಜಿ ವೇರಿಯೆಂಟ್ಸ್ ಮತ್ತು ಹ್ಯುಂಡೈನ ಕ್ರೆಟಾ, ಕಿಯಾ ಸೆಲ್ಟೋಸ್, ಎಂಜಿ ಆಸ್ಟರ್, ಟಾಟಾ ಪಂಚ್, ಮರ್ಸಿಡೆಸ್ ಜಿಎಲ್​ಎಸ್, ಆಡಿ ಇಟ್ರೋನ್ ಇಲೆಕ್ಟ್ರಿಕ್ ಮುಂತಾದ ಎಸ್​ಯುುವಿಗಳಿಗೆ ಮುಂಗಡ ಹಣಕೊಟ್ಟು ಗ್ರಾಹಕರು ಹಲವು ತಿಂಗಳಿಂದ ಕಾಯುತ್ತಿದ್ದಾರೆ.

    ಜಾಗತಿಕ ಕೊರತೆ: ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಸಿಯೇಷನ್ (ಎಸ್​ಐಎ) ಹೇಳುವ ಪ್ರಕಾರ, ಕೋವಿಡ್ 19 ಲಾಕ್​ಡೌನ್​ಗೂ ಮೊದಲೇ ಮೂಲಸೌಕರ್ಯದ ಕೊರತೆ ಈ ಕ್ಷೇತ್ರವನ್ನು ಕಾಡುತ್ತಲೇ ಇತ್ತು. ಲಾಕ್​ಡೌನ್ ಬಳಿಕ ಕೆಲವು ತಿಂಗಳು ಸೆಮಿಕಂಡಕ್ಟರ್ ಚಿಪ್ ಉತ್ಪಾದನೆ ನಿಂತು ಹೋಗಿತ್ತು. ಇವೆಲ್ಲವೂ ಈ ಸಮಸ್ಯೆಗೆ ಕಾರಣ. ಇದರಿಂದಾಗಿ ಆಟೊಮೊಬೈಲ್ ಮತ್ತು ಇತರೆ ಕ್ಷೇತ್ರಗಳಲ್ಲಿ ಇನ್​ಪುಟ್ ವೆಚ್ಚ ಶೇಕಡ 6 ಮತ್ತು ಅದಕ್ಕಿಂತ ಅಧಿಕ ಏರಿಕೆಯಾಗಿದೆ.

    ಹೊಸ ಕಾರುಗಳಿಗೆ ಕಾಯುತ್ತಿರುವ ಗ್ರಾಹಕರು!; 7 ಲಕ್ಷಕ್ಕೂ ಹೆಚ್ಚು ಕಾರುಗಳ ಹಸ್ತಾಂತರ ಬಾಕಿ ಸೆಮಿಕಂಡಕ್ಟರ್ ಚಿಪ್ ಕೊರತೆ ಕಾರಣ

    ಚಿಪ್ ಉತ್ಪಾದನೆ ಎಲ್ಲೆಲ್ಲಿ?: ಜಗತ್ತಿನ ಕೆಲವೇ ರಾಷ್ಟ್ರಗಳು ಚಿಪ್ ಉತ್ಪಾದಿಸುತ್ತವೆ. ಜಗತ್ತಿನಲ್ಲಿ ಒಟ್ಟು ಉತ್ಪಾದನೆಯಾಗುವ ಚಿಪ್​ಗಳ ಪೈಕಿ ಶೇಕಡ 78 ಉತ್ಪಾದನೆ ತೈವಾನ್, ದಕ್ಷಿಣ ಕೊರಿಯಾ, ಜಪಾನ್ ಮತ್ತು ಚೀನಾದಲ್ಲಾಗುತ್ತಿದೆ. ಇದಕ್ಕೆ ಹೊರತಾಗಿ ಲೀಡಿಂಗ್ ಎಡ್ಜ್ ಟೆಕ್ನಾಲಜಿ ಉತ್ಪಾದನೆಯಲ್ಲಿ ಶೇಕಡ 90ಕ್ಕೂ ಹೆಚ್ಚು ತೈವಾನ್​ನಲ್ಲೇ ಇದೆ.

    ವಿವಾದದ ಕಿಡಿ ಹೊತ್ತಿಸಿದ ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಮಾತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts