ಬರಿಪದಾ: ಶೌಚಗೃಹದ ಬಳಿ ಕರೊನಾ ರೋಗಿಗಳು ನಗ್ನವಾಗಿ ಮಲಗಿರುವುದು ಮತ್ತು ರೋಗಿಯ ಹಾಸಿಗೆಯ ಮೇಲೆ ಊಟದ ತಟ್ಟೆಗಳು ಹರಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಒಡಿಶಾದ ಬರಿಪದಾ ಪಟ್ಟಣದ ಬಂಕಿಶೋಲಾದಲ್ಲಿರುವ ಕಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದ್ದು, ವೈರಲ್ ವಿಡಿಯೋ ಆಸ್ಪತ್ರೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ರೋಗಿಯ ಸಂಬಂಧಿಕರೊಬ್ಬರು ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ವಿಡಿಯೋ ಖಚಿತತೆ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿ ಇನ್ನು ಹೇಳಿಕೆ ನೀಡಬೇಕಿದೆ. ಘಟನೆಯಿಂದ ಆತಂಕಗೊಂಡಿರುವ ಸ್ಥಳೀಯರು ಜಿಲ್ಲೆಯಲ್ಲಿರುವ ಕೋವಿಡ್ ಮ್ಯಾನೇಜ್ಮೆಂಟ್ ಕುರಿತು ಪ್ರಶ್ನೆಯೆತ್ತಿದ್ದಾರೆ.
ಆಸ್ಪತ್ರೆಯಲ್ಲಿ ಸಾವಿಗೀಡಾದ ರೋಗಿಯೊಬ್ಬರ ಸೇವಕರು ರೋಗಿಗಳನ್ನು ನೋಡಿಕೊಳ್ಳಲು ದಾದಿಯರಾಗಲಿ ಅಥವಾ ವೈದ್ಯರಾಗಲಿ ಇಲ್ಲ ಎಂದು ಹೇಳಿದ್ದಾರೆ. ಕೆಲವು ಆಮ್ಲಜನಕ ಸಿಲಿಂಡರ್‌ಗಳಿವೆ ಆದರೆ ಅವುಗಳನ್ನು ನಿರ್ವಹಿಸಲು ಯಾರೂ ಇಲ್ಲ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬರಿಪಡಾದ ಬಿಜೆಪಿ ಶಾಸಕ ಪ್ರಕಾಶ್ ಸೊರೆನ್, ಬ್ಯಾಂಕಿಸೋಲ್‌ನ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಆಮ್ಲಜನಕದ ಬೆಂಬಲವಿಲ್ಲದ, ಹಲವಾರು ರೋಗಿಗಳು ಸಾಯುತ್ತಿದ್ದಾರೆ. ದಾದಿಯರು ಸೋಂಕಿನ ಭಯದಿಂದ ಅವರ ಹತ್ತಿರ ಬರುತ್ತಿಲ್ಲ. ಈ ಪರಿಸ್ಥಿತಿಯಿಂದಾಗಿ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಆಹಾರವೂ ಸಿಗುತ್ತಿಲ್ಲ ಎಂದು ಆರೋಪಿಸಿದರು. (ಏಜೆನ್ಸೀಸ್)