ನ್ಯೂಸ್

ಖ್ಯಾತ Nuclear ತಜ್ಞ, ಕ್ರಿಸ್ಟಲೋಗ್ರಫರ್‌ ಡಾ. ರಾಜಗೋಪಾಲ ಚಿದಂಬರಂ ನಿಧನ

ಮುಂಬೈ: ಭಾರತ ಕಂಡ ಶ್ರೇಷ್ಠ ಪರಮಾನು (Nuclear) ತಜ್ಞ, ಕ್ರಿಸ್ಟಲೋಗ್ರಫರ್‌ ಡಾ. ರಾಜಗೋಪಾಲ ಚಿದಂಬರಂ ಮುಂಬೈನಲ್ಲಿ ನಿಧನರಾಗಿದ್ದಾರೆ. ಮೃತರಿಗೆ 88 ವರ್ಷ ವಯಸ್ಸಾಗಿತ್ತು.

1975-88ರ ಅವಧಿಯಲ್ಲಿ ನಡೆದ ಪರಮಾಣು ಪರೀಕ್ಷೆಗಳಲ್ಲಿ ರಾಜಗೋಪಾಲ ಚಿದಂಬರಂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇದಲ್ಲದೆ ಅಂತರರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿ (IAEA) ಆಡಳಿತ ಮಂಡಳಿಗೆ 1994–95 ಅವಧಿಯ ಅಧ್ಯಕ್ಷರಾಗಿದ್ದರು. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿದ್ದರು.

ಭಾರತದ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮದಲ್ಲಿ ಡಾ. ಚಿದಂಬರಂ ಅವರು ಪ್ರಮುಖ ಪಾತ್ರ ವಹಿಸಿದ್ದರು. 1975ರ ಪೋಖ್ರಾನ್‌–1 ಪರೀಕ್ಷೆ ಹಾಗೂ 1998ರಲ್ಲಿ ನಡೆದ ಪೋಖ್ರಾನ್‌ –2 ಪರೀಕ್ಷೆಯ ಸಂಯೋಜಕರಾಗಿದ್ದರು. ಇವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು 1975ರಲ್ಲಿ ಪದ್ಮಶ್ರೀ ಹಾಗೂ 1999ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಸತ್ಕರಿಸಿದೆ.

https://www.vijayavani.net/man-poses-as-us-model-on-india-trip-scams-700-women-on-dating-apps

https://www.vijayavani.net/yogesh-gowda-was-murderere-intentionally-by-vinay-kulkarni-says-prime-accused

https://www.vijayavani.net/two-students-killed-in-car-accident-two-injured