ನವದೆಹಲಿ: ಭೋಜ್ಪುರಿ ಸಿನಿಮಾ ನಟಿಯರಾದ ತ್ರಿಶಾಕರ್ ಮಧು ಮತ್ತು ಪ್ರಿಯಾಂಕಾ ಪಂಡಿತ್ ಬೆನ್ನಲ್ಲೇ ಖ್ಯಾತ ಗಾಯಕಿ ಶಿಲ್ಪಿ ರಾಜ್ ಅವರ ಎಂಎಂಎಸ್ ವಿಡಿಯೋ ಕೂಡ ಸೋರಿಕೆಯಾಗಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡದಂತೆ ಗಾಯಕಿ ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಶಿಲ್ಪಿ ರಾಜ್ ಬಾಯ್ಫ್ರೆಂಡ್ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆನ್ನಲಾದ ಎಂಎಂಎಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಎಂಎಂಎಸ್ ವಿಡಿಯೋ ಸೋರಿಕೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಶಿಲ್ಪಿ ರಾಜ್ ಕಣ್ಣೀರಾಕಿದ್ದಾರೆ. ಕೆಲವು ಏನೇನೋ ಬರೆದು ವಿಡಿಯೋವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ದಯವಿಟ್ಟು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಬೇಡಿ. ಏನಾದರೂ ಮಾಡಿ ಆದರೆ, ನನಗೆ ಸಹಾಯ ಮಾಡಿ. ಈವರೆಗೂ ನಾನು ಯಾರೊಬ್ಬರ ಜತೆಯಲ್ಲೂ ಜೋರು ಧ್ವನಿಯಲ್ಲಿ ಮಾತನಾಡಿದವಳಲ್ಲ. ಬಡ ಕುಟುಂಬದಿಂದ ಬಂದಿದ್ದೇ ನನ್ನ ತಪ್ಪಾಯಿತಾ? ಎಂದು ಶಿಲ್ಪಿ ರಾಜ್ ಅಳಲು ತೋಡಿಕೊಂಡಿದ್ದಾರೆ.
ನಾನೊಬ್ಬಳೆ ಸ್ವಂತವಾಗಿ ಮುಂದೆ ಬಂದಿಲ್ಲ. ನೀವೆಲ್ಲರೂ ಸೇರಿಕೊಂಡು ನನ್ನನ್ನು ವೇಗವಾಗಿ ಈ ಕ್ಷೇತ್ರದಲ್ಲಿ ಬೆಳೆಸಿದ್ದೀರಿ. ನಿಮ್ಮ ಪ್ರೀತಿಯನ್ನು ನಾನು ಪಡೆದುಕೊಂಡಿದ್ದೇನೆ. ಶಾಲೆಯಲ್ಲಿ ಇರುವಾಗಲೇ ನಾನು ಹಾಡುತ್ತಿದ್ದೆ. ಕಷ್ಟಪಟ್ಟು ಬೆಳೆದು ಬಂದಿದ್ದೇನೆ. ಈ ಕ್ಷೇತ್ರದಲ್ಲಿ ಮನರಂಜನೆಯನ್ನು ಮುಂದುವರಿಸಲಿದ್ದೇನೆ. ಆದರೆ, ಯಾಕೆ ಅಶ್ಲೀಲ ವಿಡಿಯೋಗಳನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡುತ್ತಿದ್ದೀರಿ? ನನಗೆ ಏನೂ ಅರ್ಥವಾಗುತ್ತಿಲ್ಲ. ಕೆಲವರು ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಅಲ್ಲದೆ, ನನ್ನ ಬಾಯ್ಫ್ರೆಂಡ್ ಯಾರೆಂಬುದು ನನಗೆ ಆಶ್ಚರ್ಯವಾಗಿದೆ ಎನ್ನುವ ಮೂಲಕ ವಿಡಿಯೋಗೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ.
ಶಿಲ್ಪಿ ರಾಜ್ ಅವರು ಭೋಜ್ಪುರಿ ಸಿನಿಮಾದಲ್ಲಿ ತುಂಬಾ ಹೆಸರು ಮಾಡಿದ್ದಾರೆ. ಅಲ್ಲಿನ ಸ್ಟಾರ್ ನಟರ ಚಿತ್ರದಲ್ಲೇ ಅನೇಕ ಹಾಡುಗಳನ್ನು ಹಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಅವರ ಹಾಡುಗಳು ಪ್ರಸಿದ್ಧಿ ಪಡೆದಿವೆ. (ಏಜೆನ್ಸೀಸ್)