ನ್ಯೂಸ್

ಅತ್ತೆಯನ್ನು ಕೊಲ್ಲಲು ಸೊಸೆಯ ಖತರ್ನಾಕ್​ ಪ್ಲಾನ್​: ಮೊಬೈಲ್​ನಲ್ಲಿ ಬಯಲಾಯ್ತು ಭಯಾನಕ ಸಂಚು

ಬೆಂಗಳೂರು: ತಾಯಿಯನ್ನು ಕೊಲ್ಲಲು ಪ್ಲಾನ್​ ಮಾಡಿದ ಹೆಂಡತಿಯ ವಿರುದ್ಧ ಗಂಡ ದೂರು ನೀಡಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅತ್ತೆಗೆ ಊಟದಲ್ಲಿ ನಿದ್ರೆ ಮಾತ್ರೆ ಮತ್ತು ಜಿರಳೆ ಔಷಧಿ ಹಾಕಿ ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಮೇಲೆ ಆಯಿಶಾ ವಿರುದ್ದ ಆಕೆಯ ಪತಿ ಆಸಿಫ್ ಖಾನ್ ದೂರು ನೀಡಿದ್ದಾರೆ.

ಆಯಿಶಾ ತನ್ನ ತಾಯಿಯ ಜೊತೆ ಮಾತಾಡಿದ್ದ ಆಡಿಯೋದಲ್ಲಿ ಕೊಲೆಯ ಸಂಚು ಬಯಲಾಗಿದೆ. ನಿದ್ರೆ ಮಾತ್ರೆ ಮತ್ತು ಜಿರಲೆ ಔಷಧ ಕಾಲಿ ಆಗಿದೆ. ಮೆಡಿಕಲ್​ನಲ್ಲಿ ಚೆನ್ನಾಗಿರುವ ಮಾತ್ರೆ ಮತ್ತು ಔಷಧಿ ತಂದುಕೊಡು ಊಟದಲ್ಲಿ ಹಾಕಿ ಕೊಡ್ತಿನಿ ಎಂದಿದ್ದಾಳೆ.

ಮಾತ್ರೆ ಹಾಕಿದ್ದ ಊಟ ಮಾಡಿ ಆಸಿಫ್​ ಕುಟುಂಬ ಅಸ್ವಸ್ಥ‌ವಾಗಿತ್ತು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಸದ್ಯ ಅಯಿಶಾ, ಹುಸೇನ್ ಸಾಬ್, ಕಮರ್ ತಾಜ್, ಹರಾರತ್ ವಿರುಧ್ಧ ಭಾರತೀಯ ದಂಡ ಸಂಹಿತೆ 307, 323, 504, 506 ಸೆಕ್ಷನ್ ಅಡಿಯಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)