ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೈಕಮಾಂಡ್ ಏಜೆಂಟ್ ವೇಣುಗೋಪಾಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿ ಅಂತ ಕರೆ ಮಾಡಿ ಆದೇಶ ಕೊಟ್ಟ ತಕ್ಷಣ ಚಾಚೂ ತಪ್ಪದೇ ಅವರ ತಾಳಕ್ಕೆ ತಕ್ಕಂತೆ ಕುಣಿಯುವ ನಿಮ್ಮ ಹೈಕಮಾಂಡ್ ನಿಷ್ಠೆ ನಿಜಕ್ಕೂ ಮೆಚ್ಚಲೇಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಆದಾಯ ತೆರಿಗೆಯ ಮಾಹಿತಿ
ಬೇರೆ ಪಕ್ಷದಿಂದ ವಲಸೆ ಬಂದಿದ್ದರೂ ನನ್ನ ಹೈಕಮಾಂಡ್ ನಿಷ್ಠೆ ಯಾರಿಗಿಂತಲೂ ಕಡಿಮೆಯಿಲ್ಲ ಎಂದು ತೋರಿಸಿಕೊಳ್ಳುವ ನಿಮ್ಮ ತುಡಿತ ಮೆಚ್ಚಲೇಬೇಕು. ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಮತ್ತೊಬ್ಬರ ತಟ್ಟೆಯಲ್ಲಿ ನೊಣ ತೋರಿಸುವ ಉಸಾಬರಿ ನಿಮಗ್ಯಾಕೆ? ಎಂದರು.
ಬಸವಣ್ಣನವರು ಹೇಳಿದಂತೆ, "ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ" ಎಂದು ಹೇಳುವ ಮುಖೇನ ತಿರುಗೇಟು ನೀಡಿದ್ದಾರೆ.