ನ್ಯೂಸ್

ಅನುಪಮಾ ಇದೆಲ್ಲ ಏನಮ್ಮಾ... ಮಲಯಾಳಿ ಬೆಡಗಿ ಮೇಲೆ ಅಭಿಮಾನಿಗಳ ಮುನಿಸು!

ಹೈದರಾಬಾದ್​: ಮಲಯಾಳಿ ಬೆಡಗಿ ಅನುಪಮಾ ಪರಮೇಶ್ವರನ್ ಮೇಲೆ ಅವರ ಅಭಿಮಾನಿಗಳು ತುಂಬಾ ಬೇಸರವಾಗಿದ್ದಾರೆ. ತೆಲುಗು ಸಿನಿಮಾವೊಂದರಲ್ಲಿ ತುಂಬಾ ಬೊಲ್ಡ್​ ಆಗಿ ಕಾಣಿಸಿಕೊಂಡಿರುವುದನ್ನು ಸಹಿಸದ ಅಭಿಮಾನಿಗಳು ಕಾಮೆಂಟ್​ಗಳ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ ಎರಡನೇ ಹೀರೋಯಿನ್​ ಪಾತ್ರವಾಗಿ ಅನುಪಮಾರನ್ನು ತೆಲುಗು ಚಿತ್ರರಂಗದಲ್ಲಿ ಪರಿಚಯಿಸಲಾಯಿತು. ಆದರೆ, ಎರಡನೇ ಹೀರೋಯಿನ್​ ಪಾತ್ರವೇ ಅನುಪಮಾಗೆ ಲಕ್​ ಆಗಿ ಬದಲಾಯಿತು. ಮೂರನೇ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾದ ಅನುಪಮಾ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲೂ ಪುನೀತ್​ ಅಭಿನಯದ ನಟ ಸಾರ್ವಭೌಮ ಚಿತ್ರದಲ್ಲಿ ಅಭಿನಯಿಸಿ ಕನ್ನಡಿಗರ ಮನ ಗೆದ್ದಿದ್ದಾರೆ.

ಇದೀಗ ಅನುಪಮಾ ಅಭಿಮಾನಿಗಳ ಹೃದಯವನ್ನು ಕದಡಿದ್ದಾರೆ. ರೌಡಿ ಬಾಯ್ಸ್​ ಹೆಸರಿನ ಚಿತ್ರದಲ್ಲಿ ಅನುಪಮಾ ನಟಿಸಿದ್ದು, ಈ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿದೆ. ಟೀಸರ್​ ಕೂಡ ಯುವಕರನ್ನು ಸೆಳೆದಿದೆ. ಚಿತ್ರತಂಡ ಇತ್ತೀಚೆಗಷ್ಟೇ ಜೂ. ಎನ್​ಟಿಆರ್​ ಕೈಯಲ್ಲಿ ಟ್ರೈಲರ್​ ಬಿಡುಗಡೆ ಮಾಡಿಸಿದ್ದು, ಇದೇ ಟ್ರೈಲರ್​ ಅನುಪಮಾ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಟ್ರೈಲರ್​ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೆ, ಟ್ರೈಲರ್​ನಲ್ಲಿರುವ ಲಿಪ್​ಲಾಕ್​ ದೃಶ್ಯ ಅಭಿಮಾನಿಗ ಹೃದಯ ಬಿರಿಯುವಂತೆ ಮಾಡಿದೆ. ಅನಪಮಾರನ್ನು ಅಭಿಮಾನಿಗಳು ಯಾವಾಗಲೂ ಪಕ್ಕದ ಮನೆ ಯುವತಿಯ ರೀತಿ ಕಾಣುತ್ತಿದ್ದರು. ಎಲ್ಲ ತಮ್ಮ ಗ್ಲಾಮರ್​ ಅನ್ನು ಹೆಚ್ಚಾಗಿ ಪ್ರದರ್ಶಿಸದೇ ಸಹ ಅಭಿನಯದಿಂದಲೇ ಅನುಪಮಾ ಮಾತಾಗಿದ್ದರು.

ಇದೀಗ ಚಿತ್ರದಲ್ಲಿ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಹೀರೋ ಜತೆ ಲಿಪ್​ಲಾಕ್​ ಮಾಡಿರುವುದು ಅನುಪಮಾ ಅಭಿಮಾನಿಗಳಿಗೆ ಬೇಸರ ತರಿಸಿದ್ದು, ಇದೆಲ್ಲ ಏನಮ್ಮ ಅನುಪಮಾ ಎಂದು ಪ್ರಶ್ನಿಸುತ್ತಿದ್ದಾರೆ. (ಏಜೆನ್ಸೀಸ್​)