More

    ಮೇಕೆದಾಟು ಪಾದಯಾತ್ರೆ: 64 ಮಂದಿ ವಿರುದ್ಧ 3ನೇ ಎಫ್​ಐಆರ್​ ದಾಖಲು

    ರಾಮನಗರ: ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡವರ ಮೇಲೆ ಪ್ರಕರಣ ದಾಖಲಿಸುತ್ತಿರುವ ಪೊಲೀಸರು ಇದೀಗ 61 ಮಂದಿ ವಿರುದ್ಧ ಎಫ್​ಐಆರ್​ ಮಾಡಿದ್ದಾರೆ.

    ಮೊದಲ ದಿನದ ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸೇರಿ 31 ಮಂದಿ ವಿರುದ್ಧ ಕೋವಿಡ್​ ನಿಯಮ ಉಲ್ಲಂಘನೆ ಪ್ರಕರಣ ಸಾತನೂರು ಪೊಲೀಸ್​ ಠಾಣೆಯಲ್ಲಿ ದಾಖಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಡಿ.ಕೆ. ಶಿವಕುಮಾರ್​, ಸಂಸದ ಸುರೇಶ್​ ಸೇರಿ ಒಟ್ಟು 41 ಮಂದಿ ವಿರುದ್ಧ ಎರಡನೇ ಕೇಸ್​ ದಾಖಲಾಗಿತ್ತು. ಈ ಪೈಕಿ ಕೃಷ್ಣಭೈರೇಗೌಡ, ಎಚ್​. ಆಂಜನೇಯ, ಮಧು ಬಂಗಾರಪ್ಪ ಸೇರಿ 28 ಹೊಸಬರ ಹೆಸರು 2ನೇ ಎಫ್​ಐಆರ್​ನಲ್ಲಿ ಇದೆ. ಇದೀಗ ಕರೊನಾ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಕನಕಪುರ ಟೌನ್​ ಪೊಲೀಸ್​ ಠಾಣೆಯಲ್ಲಿ ಡಿಕೆಶಿ ಸೇರಿದಂತೆ 64 ಜನರ ವಿರುದ್ಧ 3ನೇ ಎಫ್​ಐಆರ್​ ದಾಖಲಾಗಿದೆ.

    3ನೇ ಎಫ್​ಐಆರ್​ನಲ್ಲಿ ಯಾರ ಹೆಸರಿದೆ?: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಎ1 ಆರೋಪಿ ಆದರೆ, ಸಂಸದ ಡಿ.ಕೆ. ಸುರೇಶ್​ ಎ2, ಸಿದ್ದರಾಮಯ್ಯ ಎ3 ಆರೋಪಿ. ಎಸ್​. ರವಿ, ಧ್ರುವನಾರಾಯಣ್​, ಪ್ರಿಯಾಂಕ್​ ಖರ್ಗೆ, ಈಶ್ವರ ಖಂಡ್ರೆ, ತನ್ವೀರ್​ ಸೇಠ್​, ಅನಿಲ್​ ಚಿಕ್ಕಮಾಧು, ಮಂಜುನಾಥ ಹುಣಸೂರು, ಸಲೀಂ ಅಹಮದ್​, ಎಚ್​.ಸಿ.ಮಹದೇವಪ್ಪ, ಲಕ್ಷ್ಮೀನಾರಾಯಣ, ಯತೀಂದ್ರ ಸಿದ್ದರಾಮಯ್ಯ, ಸುನಿಲ್​ ಘೋಷ್​, ನಲಪಾಡ್​ ಹ್ಯಾರಿಸ್​, ಕೋನಪ್ಪರೆಡ್ಡಿ, ಕೆ.ಎನ್​.ಮರೀಗೌಡ, ಡಾ. ಎಚ್​.ಡಿ. ರಂಗನಾಥ್​, ಬಿ.ಕೆ.ಸೋಮಶೇಖರ್​, ಮುಖ್ಯಮಂತ್ರಿ ಚಂದ್ರು, ಅಂಜನ್​ ಮೂರ್ತಿ, ಎಂ.ನಾರಾಯಣಸ್ವಾಮಿ, ವಿನಯ್​ ಕುಲಕರ್ಣಿ, ವಿನೋದ್​ ಸೂಟಿ, ಕೆ.ಬಿ/ಕೋಳಿವಾಡ, ಐವನ್​ ಡಿಸೋಜ, ರಘುನಂದನ್​ ರಾಮಣ್ಣ, ಪಿರಿಯಾಪಟ್ಟಣ ವೆಂಕಟೇಶ್​, ಕನಕಪುರದ ಶಂಭುಲಿಂಗಶೆಟ್ಟಿ, ಕನಕಪುರದ ಜೋಸೆಫ್​, ಅನಿಲ್​ ಕುಮಾರ್​, ಮಂಜಣ್ಣ, ಮುನಿಯಪ್ಪ, ಕಬ್ಬಾಳಗೌಡ ಸೇರಿದಂತೆ 64 ಮಂದಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

    ನನ್ನ ಬೈಯೋಕ್ಕೆ ಆಗಲ್ಲ, ಟ್ರೋಲ್​ ಮಾಡಿ ಖುಷಿಪಡ್ತಿದ್ದಾರೆ.. ಅವರಿಗೆ ನಾನೇ ಟಾರ್ಗೆಟ್ ಎನ್ನುತ್ತಲೇ ಮಹತ್ತರ ವಿಷ್ಯ ಬಿಚ್ಚಿಟ್ಟ ಡಿಕೆಶಿ

    ಮೇಕೆದಾಟು ಪಾದಯಾತ್ರೆಯಲ್ಲಿ ನಲಪಾಡ್​ರನ್ನು ಡಿ.ಕೆ.ಸುರೇಶ್ ತಳ್ಳಿದ್ದೇಕೆ? ನಲಪಾಡ್​ ​ಹ್ಯಾರಿಸ್​ ಕೊಟ್ಟ ಸ್ಪಷ್ಟನೆ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts