ಕಾಬುಲ್: ಕಳೆದ ಒಂದು ತಿಂಗಳಿಂದ ಆಫ್ಘಾನಿಸ್ತಾನದಲ್ಲಿ ರಕ್ತದೊಕುಳಿ ಆಡಿ ಇಡೀ ದೇಶವನ್ನೇ ತನ್ನ ತೆಕ್ಕೆಗೆ ಹಾಕಿಕೊಂಡಿರುವ ತಾಲಿಬಾನ್ ಬಂಡುಕೋರರು ಇದೀಗ ಸಖತ್ ಎಂಜಾಯ್ ಮೂಡ್ನಲ್ಲಿದ್ದಾರೆ. ಆಫ್ಘಾನ್ ರಾಜಧಾನಿ ಕಾಬುಲ್ ವಶಪಡಿಸಿಕೊಂಡ ಬೆನ್ನಲ್ಲೇ ಅಲ್ಲಿನ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಬಂಡುಕೋರರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ತಮ್ಮ ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದುಕೊಂಡೇ ತಾಲಿಬಾನ್ ಹೋರಾಟಗಾರರು ಎಲೆಕ್ಟ್ರಿಕ್ ಬಂಪರ್ ಕಾರು ಓಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೆ, ಮತ್ತೊಂದು ವಿಡಿಯೋದಲ್ಲಿ ಪಾರ್ಕಿನಲ್ಲಿರುವ ಆಟದ ಕುದುರೆಯನ್ನು ರೈಡ್ ಮಾಡುತ್ತಿರುವ ದೃಶ್ಯವಿದೆ.
ಇದು ಅಫ್ಘಾನಿಸ್ತಾನದ ಜನರಲ್ಲಿ ಭಯಾನಕತೆಯನ್ನು ಸೆರೆಹಿಡಿದ ವೀಡಿಯೊಗೆ ತುಂಬಾ ವ್ಯತಿರಿಕ್ತವಾಗಿದೆ. ಅಂದರೆ ಒಂದು ಕಡೆ ನೂರಾರು ಆಫ್ಘಾನ್ ಪ್ರಜೆಗಳು ಪ್ರಾಣ ಭಯದಿಂದ ಕಾಬುಲ್ ವಿಮಾನ ನಿಲ್ದಾಣದಲ್ಲಿ ಯುಎಸ್ ವಿಮಾನವನ್ನೇರಲು ನೂಕು ನುಗ್ಗಲಾದರೆ, ಇನ್ನೊಂದೆಡೆ ತಾಲಿಬಾನ್ ದಂಗೆಕೋರರು ಅಂದುಕೊಂಡ ಗುರಿ ಸಾಧಿಸಿದೆವು ಎಂಬ ಖುಷಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಇನ್ನು ಯುಎಸ್ ಸೇನಾ ವಿಮಾನದಲ್ಲಿ ತೂರಿಕೊಂಡ ಯುವಕರು ಹೆಚ್ಚಾಗಿ ಅಫ್ಘಾನಿಸ್ತಾನದಲ್ಲಿ ಅಮೆರಿಕ ಸರ್ಕಾರಕ್ಕೆ ಸಹಾಯ ಮಾಡಿದವರು ಎನ್ನಲಾಗಿದೆ. ಅವರಲ್ಲಿ ಕೆಲವರು ಅನುವಾದಕರಾಗಿದ್ದು, ರಾಷ್ಟ್ರವು ನಿಯಂತ್ರಣದಲ್ಲಿದ್ದಾಗ ಯುಎಸ್‌ಗೆ ಸಹಾಯ ಮಾಡಿದರು ಎಂದು ತಿಳಿದುಬಂದಿದೆ. ಒಂದು ಕಡೆ ಸಾವು-ನೋವು, ಇನ್ನೊಂದು ಕಡೆ ನಗುವಿನ ಕೇಕೆ... ನಿಜಕ್ಕೂ ಆಫ್ಘಾನ್ ನರಕಕೂಪವಾಗಿದೆ. ಅಲ್ಲಿನ ಪರಿಸ್ಥಿತಿ ಯಾವಾಗ ಸುಧಾರಣೆ ಆಗುತ್ತದೆ ಎಂದು ಅಲ್ಲಿನ ಜನರು ಆಶಾಭಾವನೆಯಲ್ಲೇ ದಿನ ದೂಡುತ್ತಿದ್ದಾರೆ. (ಏಜೆನ್ಸೀಸ್)