ನ್ಯೂಸ್

ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಾಧ್ಯಕ್ಷರ ಎದುರಲ್ಲೇ ನಡೆಯಿತು ಮಾರಾಮಾರಿ!

ಬೆಂಗಳೂರು: ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಎಂಎಲ್​ಸಿ ನಾರಾಯಣಸ್ವಾಮಿ ಮತ್ತು ಮನೋಹರ್ ನಡುವೆ ಶುಕ್ರವಾರ ಮಧ್ಯಾಹ್ನ ಗಲಾಟೆ ನಡೆದಿದ್ದು, ಉಭಯ ನಾಯಕರು ಕೈ-ಕೈ ಮಿಲಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ

ಕಾರ್ಯಾಧ್ಯಕ್ಷರುಗಳ ಸಮ್ಮುಖದಲ್ಲಿಯೇ ಈ ಗಲಾಟೆ ನಡೆದಿದ್ದು, ಮಾಧ್ಯಮದವರು ಸ್ಥಳಕ್ಕೆ ಹೋಗುತ್ತಿದ್ದಂತೆ ಕಚೇರಿಯ ಬಾಗಿಲನ್ನು ಕಾಂಗ್ರೆಸ್​ ಮುಖಂಡರು ಬಂದ್ ಮಾಡಿಕೊಂಡರು. ಕೆಲ ಸಮಯದ ಬಳಿಕ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಅವರು ಕೆಪಿಸಿಸಿ ಕಚೇರಿಯಿಂದ ಹೊರನಡೆದರು. ಇದನ್ನೂ ಓದಿರಿ ಶಿವಮೊಗ್ಗದಲ್ಲಿ ಶವಗಳ ಮೇಲೆಯೇ ಓಡಾಡಿದ ಜನ… ಬೆಚ್ಚಿಬೀಳಿಸುತ್ತೆ ಸ್ಫೋಟದ ಭೀಕರತೆ

ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಯಾವುದೇ ಗಲಾಟೆ ನಡೆದಿಲ್ಲ. ಇಂದು ಬೆಳಗ್ಗೆ ಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಅವರು ನಮ್ಮ ಸದಸ್ಯರನ್ನ ಸೆಳೆಯುವ ಕೆಲಸ ಮಾಡಿದ್ದರು. ಆ ವಿಚಾರವಾಗಿ ಜೋರುಜೋರು ಮಾತು ನಡೆಯಿತು. ಆದರೆ ಯಾರೂ ಯಾರ ಮೇಲೂ ಹಲ್ಲೆ ಮಾಡಿಲ್ಲ. ನಾವು ಬಾಗಿಲು ಹಾಕಿ ಪಕ್ಷದ ವಿಚಾರ ಚರ್ಚೆ ಮಾಡಿದ್ದೇವೆ. ಚರ್ಚೆಯನ್ನ ಹೊರತುಪಡಿಸಿ ಬೇರೆ ಏನು ಆಗಿಲ್ಲ ಎನ್ನುವ ಮೂಲಕ ಘಟನೆಯನ್ನ ಮುಚ್ಚಿಹಾಕಲು ಯತ್ನಿಸಿದರು.