ನ್ಯೂಸ್

ಕ್ವಾರಂಟೈನ್​ ಕೇದ್ರದಲ್ಲಿ ಮತ್ತೊಂದು ಸಾವು, ಮುಂದುವರಿದ ಆತ್ಮಹತ್ಯೆ ಸರಣಿ...

ದಾವಣಗೆರೆ: ಕ್ವಾರಂಟೈನ್​ ಕೇಂದ್ರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೋವಿಡ್​ 19 ವರದಿ ನೆಗೆಟಿವ್​ ಬಂದಿದ್ದರೂ 53 ವರ್ಷದ ವ್ಯಕ್ತಿಯೊಬ್ಬ ಆಸ್ಪತ್ರೆಯ ಶೌಚಗೃಹದಲ್ಲೇ ಭಾನುವಾರ ಬೆಳಗ್ಗೆ ನೇಣುಬಿಗಿದುಕೊಂಡು ಸತ್ತಿದ್ದ. ಅದೇ ದಿನ ರಾತ್ರಿ 34 ವರ್ಷದ ಮತ್ತೊಬ್ಬ ವ್ಯಕ್ತಿ ಚಿಗಟೇರಿ ಜಿಲ್ಲಾಸ್ಪತ್ರೆಯ ಶೌಚಗೃಹದಲ್ಲಿ ವರದಿ ಬರುವ ಮುನ್ನವೇ ನೇಣಿಗೆ ಕೊರಳೊಡ್ಡಿದ್ದಾನೆ.

ಆನೆಕೊಂಡ ಕಂಟೇನ್ಮೆಂಟ್ ವಲಯದ ನಿವಾಸಿಯೊಬ್ಬರನ್ನು ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಕ್ವಾರಂಟೈನ್‌ ಮಾಡಲಾಗಿತ್ತು. ನಂತರ ಸ್ವಾಬ್ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಅದರ ವರದಿ ಬರಬೇಕಿದೆ. ಈ ನಡುವೆ ಅದೇ ರಾತ್ರಿ ಆಸ್ಪತ್ರೆಯ ಶೌಚಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ಕಾರಣ ತಿಳಿದುಬಂದಿಲ್ಲ.