ಆಂಧ್ರಪ್ರದೇಶ: ಟಾಲಿವುಡ್ನ ಐಕಾನ್ ಸ್ಟಾರ್, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2’ (Pushpa 2) ಸಿನಿಮಾ ಡಿ.05ರಂದು ಜಾಗತಿಕ ಮಟ್ಟದಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. 'ಆರ್ಆರ್ಆರ್' ಚಿತ್ರದ ದಾಖಲೆ ಹಿಂದಿಕ್ಕಿರುವ ಪುಷ್ಪ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ. ರಿಲೀಸ್ ಆದ ಕ್ಷಣದಿಂದಲೂ ದೇಶಾದ್ಯಂತ ಪುಷ್ಪ ಚಿತ್ರದ್ದೇ ಹವಾ ಹೆಚ್ಚಾಗಿದ್ದು, ಚಿತ್ರಮಂದಿರಗಳಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಈಗಾಗಲೇ ಚಿತ್ರ ತಯಾರಕರು 2ನೇ ಭಾಗ ರಿಲೀಸ್ ಆಗುವ ಮುನ್ನವೇ ಪಾರ್ಟ್ 3 (Pushpa 3 Release) ಸುಳಿವು ನೀಡಿರುವುದು ಸ್ಟೈಲಿಶ್ ಸ್ಟಾರ್ ಫ್ಯಾನ್ಸ್ಗಳಲ್ಲಿ ಕೌತುಕ ಹೆಚ್ಚಿಸಿದ್ದೇ ಆದರೂ ಬಿಡುಗಡೆ ವಿಷಯದಲ್ಲಿ ಒಂದು ಟ್ವಿಸ್ಟ್ ಇದೆ ಎಂಬ ಸಂಗತಿ ಸದ್ಯ ಬೇಸರ ತಂದಿದೆ.
ಇದನ್ನೂ ಓದಿ: CM Siddaramaiah Statement | 2 ಕೋಟಿ ರೂ. ಖರ್ಚು ಮಾಡಿ ಎಲ್ಲಾ ಸೌಲಭ್ಯವಿರುವ ಈ ಶಾಲೆ ನಿರ್ಮಿಸಿದ್ದಕ್ಕೆ ಧನ್ಯವಾದ
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಅವರ ಪಾತ್ರಗಳು, ಡೈಲಾಗ್ಗಳು ನೋಡುಗರ ಗಮನ ಸೆಳೆದಿದ್ದು, 'ಪುಷ್ಪ 2' ರಿಲೀಸ್ಗೂ ಮುಂಚಿತವಾಗಿಯೇ ನಿರ್ದೇಶಕ ಸುಕುಮಾರ್ ಮೂರನೇ ಭಾಗವು ರೆಡಿಯಾಗಿದೆ ಎಂದು ಅಭಿಮಾನಿಗಳಿಗೆ ಸುಳಿವು ಬಿಟ್ಟುಕೊಟ್ಟರು. ಈ ವಿಷಯ ಕೇಳಿ ಸಖತ್ ಥ್ರಿಲ್ ಆಗಿದ್ದ ಅಭಿಮಾನಿಗಳು, ಪ್ರಾಯಶಃ ಎರಡನೇ ಭಾಗ ಹಿಟ್ ಆದ ನಂತರ, ಒಂದು ವರ್ಷ ಬಿಟ್ಟು 'ಪುಷ್ಪ 3' ಬಿಡುಗಡೆ ಮಾಡಬಹುದು ಎಂದು ಊಹಿಸಿದ್ದರು. ಆದರೆ, ಚಿತ್ರವು 5-6 ವರ್ಷಗಳು ಮುಂದೆ ಹೋಗಬಹುದು ಎಂಬ ವಿಷಯ ಸದ್ಯ ಅನೇಕರಲ್ಲಿ ಗೊಂದಲ ಮೂಡಿಸಿದೆ.
ವರದಿಯ ಪ್ರಕಾರ, ಅಲ್ಲು ಅರ್ಜುನ್ 'ಪುಷ್ಪ 2' ಚಿತ್ರದ ನಂತರ ಈ ಹಿಂದೆ ಬಾಕಿ ಉಳಿದಿರುವ ಇತರ ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಲಿದ್ದಾರೆ ಎನ್ನಲಾಗಿದೆ. ಬಹಳ ಸಮಯದಿಂದ ಸರದಿಯಲ್ಲಿ ನಿಂತಿದ್ದ ಸಿನಿಮಾಗಳನ್ನು ಇದೀಗ ಮುಗಿಸಿಕೊಡಬೇಕಾದ ಜವಾಬ್ದಾರಿ ಸ್ಟೈಲಿಶ್ ಸ್ಟಾರ್ ಹೆಗಲೇರಿದೆ. ಈ ಕಾರಣಗಳಿಂದ 'ಪುಷ್ಪ 3' ಮಾಡಲು ಸದ್ಯ ನಟನ ಬಳಿ ಹೆಚ್ಚು ಸಮಯವಿಲ್ಲ. ಇದರೊಂದಿಗೆ ನಿರ್ದೇಶಕರ ಸಮಯ ಕೂಡ ಬೇರೆ ಪ್ರಾಜೆಕ್ಟ್ಗಳಿಗೆ ವ್ಯಯವಾಗಲಿದ್ದು, ಮೂರನೇ ಭಾಗದ ಬಗ್ಗೆ ತಲೆಕೆಡಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ಚಿತ್ರದ ಕೆಲಸಗಳನ್ನು ಮುಂದೂಡಲಾಗಿದೆ.
'ಪುಷ್ಪ 2' ಹಿಟ್ ಆದ ಬೆನ್ನಲ್ಲೇ ನಿರ್ದೇಶಕ ಸುಕುಮಾರ್ ತಮ್ಮ ಮುಂದಿನ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿರುವ ಕಾರಣ 'ಪುಷ್ಪ 3' ರಿಲೀಸ್ನಲ್ಲಿ ವಿಳಂಬವಾಗಲಿದೆ. ವರದಿಯ ಪ್ರಕಾರ, ಮೂರನೇ ಭಾಗ ತಾತ್ಕಾಲಿಕವಾಗಿ 2028 ಅಥವಾ 2029ರ ಮಧ್ಯೆ ತೆರೆ ಕಾಣಬಹುದು ಎಂದು ಹೇಳಲಾಗಿದೆ,(ಏಜೆನ್ಸೀಸ್).