ನ್ಯೂಸ್

Pushpa-2: 'ಪುಷ್ಪ 2: ದಿ ರೂಲ್' ದಾಖಲೆ: ಅಲ್ಲು ಅರ್ಜುನ್​ ಫ್ಯಾನ್ಸ್​ ಫುಲ್​ಖುಷ್​!

ಹೈದರಾಬಾದ್ (ತೆಲಂಗಾಣ): ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ 2: ದಿ ರೂಲ್'(Pushpa-2) ಚಿತ್ರವನ್ನು ವೀಕ್ಷಿಸಲು ಅಭಿಮಾನಿಗಳಿಗೆ ಉತ್ಸುಕರಾಗಿದ್ದಾರೆ. ಇದರ ನಡುವೆ ನಿರ್ಮಾಪಕ ರವಿಶಂಕರ್ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಗ್ಗೆ ಆಸಕ್ತಿದಾಯಕ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

'ಪುಷ್ಪಾ 2: ದಿ ರೂಲ್' ಒಂದು ದಿನ ಮುಂಚಿತವಾಗಿ ಬಿಡುಗಡೆಯಾಗಲಿದೆ. ನಾವು ಮೊದಲು ಡಿಸೆಂಬರ್ 6 ಬಿಡುಗಡೆ ಮಾಡಬೇಕು ಎಂದುಕೊಂಡಿದ್ದವು. ಆದರೆ ಈಗ ನಾವು ಡಿಸೆಂಬರ್ 5 ರಂದು ಅಂದರೆ ಒಂದು ದಿನ ಮೊದಲೇ ಚಿತ್ರಮಂದಿರಗಳಿಗೆ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ನಾವು ಈ ಚಿತ್ರವನ್ನು ಪ್ರಪಂಚದಾದ್ಯಂತ ಸುಮಾರು 11,500 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ವಿದೇಶಗಳಲ್ಲಿ 5000 ಸ್ಕ್ರೀನ್​ಗಳಲ್ಲಿ ಬಿಡುಗಡೆಯಾದರೆ, ಭಾರತದಲ್ಲಿ 6500 ಸ್ಕ್ರೀನ್‌ಗಳಲ್ಲಿ ಚಿತ್ರವು ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಇನ್ನು ಭಾರತೀಯ ಸಿನಿಮಾ ಇಷ್ಟೊಂದು ಸ್ಕ್ರೀನ್​ಗಳ ಮೇಲೆ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಎಂದು ಇಂಡಸ್ಟ್ರಿ ಮೂಲಗಳು ಅಭಿಪ್ರಾಯಪಡುತ್ತಿವೆ.

ಇನ್ನು 'ಪುಷ್ಪಾ 2: ದಿ ರೂಲ್' 6 ಭಾಷೆಗಳಲ್ಲಿ ಅಂದರೆ, ತೆಲುಗು, ಕನ್ನಡ ತಮಿಳು, ಮಲಯಾಳಂ, ಹಿಂದಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಥಿಯೇಟರ್‌ಗಳಲ್ಲಿ ಬರಲು ಸಿದ್ಧವಾಗಿದೆ.