ನ್ಯೂಸ್

ಪುರಿ ಜಗನ್ನಾಥ 'ರತ್ನ ಭಂಡಾರ್' 46ವರ್ಷದ ನಂತರ ತೆರೆಯಲಿದೆ! ಭಕ್ತರಲ್ಲಿ ಹೆಚ್ಚಿದ ಕುತೂಹಲ!

ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇವಾಲಯದ ಆಭರಣಗಳ ರಹಸ್ಯ ಕೋಣೆ 'ರತ್ನ ಭಂಡಾರ್' 46 ವರ್ಷಗಳ ಬಳಿಕ ಇದೇ ತಿಂಗಳ 14ರಂದು ತೆರೆಯಲಿde. ದ್ದು, ಕೇರಳದ ಅನಂತಪದ್ಮನಾಭಸ್ವಾಮಿ ದೇಗುಲದಂತೆ ಇಲ್ಲೂ ಎಷ್ಟು ಕೋಟಿ ಬೆಲೆಬಾಳುವ ಆಭರಣಗಳಿರಬಹುದು ಎಂಬ ಬಗ್ಗೆ ಜನರಲ್ಲಿ ಕುತೂಹಲ ಕೆರಳಿಸಿದೆ.

ಪುರಿಯ ಜಗನ್ನಾಥ ದೇವಾಲಯದ ರತ್ನ ಭಂಡಾರ ತೆರೆಯುವ ಮೇಲ್ವಿಚಾರಣೆಗಾಗಿ ರಚಿಸಲಾದ ಉನ್ನತ ಮಟ್ಟದ ಸಮಿತಿಯು ಖಜಾನೆಯ ಒಳ ಕೋಣೆಯನ್ನು ಜುಲೈ 14 ರಂದು ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿತು.

ಸಮಿತಿಯು ಅಧ್ಯಕ್ಷ ನ್ಯಾಯಮೂರ್ತಿ ಬಿಸ್ವನಾಥ್ ರಾತ್ ಸುದ್ದಿಗಾರರೊಂದಿಗೆ ಮಾತನಾಡಿ, ದೇವಾಲಯದಲ್ಲಿ ಸಂಗ್ರಹವಾಗಿರುವ ಆಭರಣಗಳನ್ನು ದಾಖಲು ಮಾಡಿ ರತ್ನ ಭಂಡಾರವನ್ನು ಮತ್ತಷ್ಟು ಭದ್ರಪಡಿಸುವ ಅಗತ್ಯವಿದೆ. ಇದಕ್ಕೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಮಾಡುವ ಕುರಿತು ವಿವರವಾದ ಚರ್ಚೆ ನಡೆಸಲಾಯಿತು ಹೇಳಿದರು.

ಜಗನ್ನಾಥ ದೇವರ ವಜ್ರ, ವೈಢೂರ್ಯ, ಗೋಮೇಧ, ಪುಷ್ಯರಾಗ, ಮಾಣಿಕ್ಯ, ರತ್ನಗಳು, ಚಿನ್ನಾಭರಣಗಳು, ಬೆಳ್ಳಿ ಮುಂತಾದವುಗಳ ತೂಕ ಮತ್ತು ಗುಣಮಟ್ಟವನ್ನು ತಜ್ಞರು ಪರಿಶೀಲಿಸಬೇಕಾಗಿದೆ. ನಮ್ಮ ಸಮಿತಿಯ ಸದಸ್ಯರಿಗೆ ಆಭರಣಗಳ ಗುಣಮಟ್ಟದ ಬಗ್ಗೆ ಅರಿವಿಲ್ಲ. ನಾವು ಕೇವಲ ಮೇಲ್ವಿಚಾರಣೆ ಮಾಡುತ್ತೇವೆ. ಗೋದಾಮಿಗೆ ರಿಪೇರಿ ಆಗಬೇಕಿರುವುದರಿಂದ ಅಲ್ಲಿ ಆಭರಣ ಎಣಿಕೆ ಸಾಧ್ಯವಿಲ್ಲ. ಈ ಸಂಪತ್ತನ್ನು ಬೇರೆಡೆಗೆ ವರ್ಗಾಯಿಸಿ ಅದನ್ನು ಬಿಗಿ ಭದ್ರತೆಯಲ್ಲಿ ಎಣಿಸಿ. ದುರಸ್ತಿ ಬಗ್ಗೆ ಅಧ್ಯಯನ ಮಾಡಲು ಮತ್ತೊಂದು ಸಮಿತಿ ಅಗತ್ಯವಿದೆ ಎಂದು ನ್ಯಾಯಮೂರ್ತಿ ರಾತ್ ವಿವರಿಸಿದರು.