ಚಂಡೀಘರ್: ಬೇಸಿಗೆಯಲ್ಲಿ ಕರೆಂಟ್ ಲೋಡ್ ತಗ್ಗಿಸಲು ಮುಂದಾಗಿರುವ ಪ,ಂಜಾಬ್ ಸರ್ಕಾರವು ಹೊಸ ನಿಯಮ ಒಂದನ್ನು ಜಾರಿಗೆ ತಂದಿದೆ.
ಮೇ 2ರಿಂದ ಜಾರಿಗೆ ಬರುವಂತೆ ಪಂಜಾಬ್ನಲ್ಲಿ ಇರುವ ಸರ್ಕಾರಿ ಕಚೇರಿಗಳು ಬೆಳಗ್ಗೆ 7:30ರಿಂದ ಮಧ್ಯಾಹ್ನ 2:00 ಘಂಟೆ ವರೆಗೂ ಕಾರ್ಯ ನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ತಿಳಿಸಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಮಾನ್ ಪಂಜಾಬ್ ಜನತೆಗಾಗಿ ಹೊಸ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು ದೇಶದಲ್ಲೇ ಪ್ರಪಥಮ ಬಾರಿಗೆ ಜಾರಿಗೆ ತರಲಾಗುತ್ತಿದೆ.
ಮೇ 2ರಿಂದ ಜಾರಿಗೆ ಬರುವಂತೆ ಸರ್ಕಾರಿ ಕಚೇರಿಗಳು ಬೆಳಗ್ಗೆ 7:30 ರಿಂದ ಮಧ್ಯಾಹ್ನ 2:00 ಘಂಟೆ ಜೂನ್ 15ರವರೆಗೂ ವರೆಗೂ ಕಾರ್ಯ ನಿರ್ವಹಿಸಲಿವೆ. ಬೇಸಿಗೆಯಲ್ಲಿ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪಂಜಾಬ್ನಲ್ಲಿ ಮಧ್ಯಾಹ್ನ 1 ರಿಂದ ಸಂಜೆ 5 ಘಂಟೆ ವರೆಗು ಬಿಸಿಲು ಹೆಚ್ಚಾಗುವುದರಿಂದ ಈ ವೇಳೆಯಲ್ಲಿ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಿದರೆ ಕರೆಂಟ್ ಲೋಡ್ ಹೆಚ್ಚಾಗುತ್ತದೆ. ಕಚೇರಿ ಸಮಯ ಬದಲಾವಣೆ ಇಂದ ಕರೆಂಟ್ ಮೇಲಿನ ಲೋಡ್ ತಗ್ಗುತ್ತದೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.