ಮುಂಬೈ: ಜನರು ಪದವಿಯ ಆಧಾರದ ಮೇಲೆ ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕಿಲ್ಲ. ಅವರ ಅಧಿಕಾರವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ ಹಾಕಿದ್ದಾರೆ ಎಂದು NCP ನಾಯಕ ಅಜಿತ್ ಪವಾರ್ ಹೇಳಿದ್ದಾರೆ.
2014ರಲ್ಲಿ ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಪದವಿಯನ್ನು ನೋಡದೆ ಅವರ ವರ್ಚಸ್ಸಿಗೆ ಮತ ಹಾಕಿದ್ದರು. ಕಳೆದ ಒಂಬತ್ತು ವರ್ಷಗಳಿಂದ ಅವರು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಹಣದುಬ್ಬರ, ನಿರುದ್ಯೋಗದಂತಹ ವಿಚಾರಗಳ ಬಗ್ಗೆ ನಾವು ಅವರನ್ನು ಪ್ರಶ್ನಿಸಬೇಕು. ಅದನ್ನು ಬಿಟ್ಟು ಹೀಗೆ ಅವರ ಶಿಕ್ಷಣದ ಬಗ್ಗೆ ಪ್ರಶ್ನಿಸುವುದು ಸರಿಯಲ್ಲ ಎಂದಿದ್ದಾರೆ.
ಅವರ ಪದವಿ ಬಗ್ಗೆ ಸ್ಪಷ್ಟತೆ ಸಿಕ್ಕರೆ ಹಣದುಬ್ಬರ, ನಿರುದ್ಯೋಗ ತಹಬದಿಗೆ ಬರುತ್ತದೆಯೇ. ಇದನ್ನು ಬಿಟ್ಟು ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತೋಣ ಎಂದು NCP ನಾಯಕ ಅಜಿತ್ ಪವಾರ್ ವಿಪಕ್ಷಗಳ ನಾಯಕರಿಗೆ ಕಿವಿಮಾತನ್ನು ಹೇಳಿದ್ದಾರೆ.