ನ್ಯೂಸ್

ಮಾಧ್ಯಮದವರ ಮುಂದೆ ದರ್ಪದ ಮಾತು: ಬಂಧನದಲ್ಲಿದ್ದರೂ ಬುದ್ಧಿ ಕಲಿಯದ ಆರೋಪಿ ಸುರೇಶ್​ ಕಾಟೇಗಾಂವ್​

mahalakshmihm

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಉದ್ಯಮಿ ಸುರೇಶ ಕಾಟೇಗಾಂವ್ ಮಾಧ್ಯಮದವರ ಮುಂದೆ ದರ್ಪ ತೋರಿದ್ದಾನೆ.

ಶನಿವಾರ ಪೊಲೀಸ್ ಭದ್ರತೆಯಲ್ಲಿ ಕಛೇರಿ ಹೊರಗಡೆ ಬರುತ್ತಿದ್ದಾಗ ಮಾಧ್ಯಮದವರ ಕ್ಯಾಮೆರಾ ಕಂಡು "ಮಾಡ್ಕೋ ಮಾಡ್ಕೋ" ಎಂದು ದರ್ಪದ ಮಾತನ್ನಾಡಿದ್ದಾನೆ.

ಮಹಾರಾಷ್ಟ್ರದ ಉದ್ಯಮಿ ಸುರೇಶ ಕಾಟೇಗಾಂವ್ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಗೆ ರಕ್ಷಣೆ ನೀಡಿದ್ದನು. ಸದ್ಯ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳಿಂದ ತನಿಖೆ ಚುರುಕುಗೊಂಡಿದೆ.