ಸೋಲಾಪುರ: ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಕೊನೆಗೂ ಪೊಲೀಸರ ಅತಿಥಿಯಾಗಿದ್ದು, ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಬಂಧಿಸಲಾಗಿದೆ.
ಮೊದಲು ಆರೋಪಿ ಹೈದರಾಬಾದ್ನಲ್ಲಿದ್ದಾನೆ ಎಂದು ಮಾಹಿತಿ ಬಂದ ಕೂಡಲೇ ಸಿಐಡಿ ಅಧಿಕಾರಿಗಳು ಹೈದರಾಬಾದ್ಗೆ ತೆರಳಿದ್ದರು, ಸಿಐಡಿ ಅಧಿಕಾರಿಗಳು ಬಂದಿರುವ ಮಾಹಿತಿ ಪಡೆದು ಅಲ್ಲಿಂದಲೂ ಎಸ್ಕೇಪ್ ಆಗಿದ್ದ. ಈ ಮಾಹಿತಿಯನ್ನು ಪಡೆದ ಅಧಿಕಾರಿಗಳು ಸೋಲಾಪುರಕ್ಕೆ ತೆರಳಿ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಬಂಧಿಸಿದ್ದಾರೆ.
ಆರ್.ಡಿ.ಪಾಟೀಲ್ ನನ್ನು ಬಂಧಿಸಿರುವ ಪೊಲೀಸರು ಕಲಬುರಗಿಗೆ ಕರೆತರುತ್ತಿದ್ದಾರೆ. ಇನ್ನು ಬಂಧನದ ವೇಳೆ ಹೈಡ್ರಾಮಾ ಮಾಡಿರುವ ಆರ್.ಡಿ.ಪಾಟೀಲ್, ಅಧಿಕಾರಿಗಳಿಗೆ ಟಚ್ ಮಾಡದಂತೆ ಆವಾಜ್ ಹಾಕಿದ್ದಾನೆ.ಇದಕ್ಕೆ ಬಗ್ಗದ ಅಧಿಕಾರಿಗಳು ಆರೋಪಿಯನ್ನು ಕರೆತರುತ್ತಿದ್ದಾರೆ.