ರಾಜ್ಯದ ಎಲ್ಲಾ ಇಲಾಖೆಯಲ್ಲೂ ಅಕ್ರಮ ನಡೆಯುತ್ತಿರುವುದು ಸರ್ಕಾರಕ್ಕೂ ಗೊತ್ತಿದೆ: ಎಚ್​.ಡಿ ಕುಮಾರಸ್ವಾಮಿ

HDk
Published on

ಬೀದರ್: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮುಂದುವರಿಯುತ್ತಿದ್ದು, ದೊಡ್ಡ ದೊಡ್ಡವರ ಕೈವಾಡವಿರುವುದು ಬೆಳಕಿಗೆ ಬರುತ್ತಿದೆ. ಈ ನಡುವೆ ರಾಜ್ಯದ ಎಲ್ಲಾ ಇಲಾಖೆಯಲ್ಲೂ ಅಕ್ರಮ ಇರುವುದು ನನಗಷ್ಟೇ ಅಲ್ಲ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೀದರ್​ನಲ್ಲಿ ಮಾತನಾಡಿರುವ ಅವರು ಸಹಕಾರ ಕ್ಷೇತ್ರ, ಜಿಲ್ಲಾ ಹಾಲು ಉತ್ಪಾದಕರ ಸಂಘದಲ್ಲಿ 25ರಿಂದ 50 ಲಕ್ಷ ದವರೆಗೆ ಲಂಚ ಪಡೆಯಲಾಗುತ್ತಿದೆ.ಎಲ್ಲಿ ಅಕ್ರಮವಿಲ್ಲ ಹೇಳಿ, ಎಲ್ಲಾ ಇಲಾಖೆಯಲ್ಲೂ ದೊಡ್ಡ ದೊಡ್ಡ ಕರ್ಮಕಾಂಡಗಳು ನಡೆಯುತ್ತಿವೆ ಎಂದರು.

ಕೆಪಿಎಸ್​ಸಿ ಶುದ್ಧ ಮಾಡುತ್ತೇವೆ ಎಂದು ಹಿಂದಿನ ಕಾಂಗ್ರೆಸ್​ ಸರ್ಕಾರ ಶ್ಯಾಮಭಟ್ಟರನ್ನ ನೇಮಿಸಿದ್ದರು. ಅವರು ಒಂದು 1 ಕೋಟಿ ರೂ.ಹಣ ತೆಗೆದುಕೊಂಡಿದ್ದಾರೆ. ಆದರೆ ಕೆಲಸವೂ ಸಿಗದೇ ದುಡ್ಡು ಕಳೆದುಕೊಂಡವರು ಇವತ್ತಿಗೂ ಅಲೆದಾಡುತ್ತಿದ್ದಾರೆ. ನಾಡಿನ ಬಡ ಮಕ್ಕಳು ಕೆಲಸ ಸಿಗದೇ ದುಡ್ಡು ಕಳೆದುಕೊಂಡಿದ್ದಾರೆ,ಇದನ್ನ ಸರಿಪಡಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಸಿದ್ದರಿಲ್ಲ ಇವತ್ತು ಎಸ್ಐ ಒಂದು ಹೊರಗಡೆ ಬಂದಿದೆ, ಪ್ರತಿಯೊಂದು ಕ್ಷೇತ್ರದಲ್ಲಿ ಈ ರೀತಿ ಅಕ್ರಮ ನಡೆಯುತ್ತಿದೆ ಎಂದರು.

ಮನೆ ಮಠ ಮಾರಿ ೨೫, ೩೦ ಲಕ್ಷ ಕೊಟ್ಟು ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇದರಲ್ಲಿ ದೊಡ್ಡವರು ಯಾರು ಸಿಕ್ಕಿಹಾಕಿಕೊಳ್ಳುವುದಿಲ್ಲ. ಇದರಲ್ಲಿ ದೊಡ್ಡ ರಾಜಕಾರಣಿಗಳು ಇದ್ದಾರೆ ಎಂದು ಹೇಳಲೂ ಆಗುವುದಿಲ್ಲ. ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net