ನ್ಯೂಸ್

ಅಪ್ಪ ಮತ್ತು ಸಾಕುತಂದೆ ನಡುವಿನ ಗಲಾಟೆಯಲ್ಲಿ ಅಪ್ಪ-ಮಗ ಕೊಲೆ! ಮತ್ತೊಬ್ಬನ ಸ್ಥಿತಿ ಚಿಂತಾಜನಕ

arunakunigal

ಚಿಕ್ಕಬಳ್ಳಾಪುರ: ಮನೆ ಬಾಡಿಗೆ ಹಣಕ್ಕಾಗಿ ಅಣ್ಣ-ತಮ್ಮಂದಿರ ನಡುವೆ ಶುರುವಾರ ಬಡಿದಾಟ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.

ಶ್ರೀರಾಮನಗರದ ಆಂಜನಪ್ಪ(55) ಮತ್ತು ಇವರ ಪುತ್ರ ವಿಷ್ಣು (17) ಮೃತ ದುರ್ದೈವಿಗಳು. ಆಂಜಿನಪ್ಪ ಮತ್ತು ಇವರ ಅಣ್ಣ ಅಶ್ವತ್ಥನಾರಾಯಣನ ನಡುವೆ ಶ್ರೀರಾಮನಗರದ ಬಡಾವಣೆಯಲ್ಲಿನ ಮನೆ ವಿಚಾರವಾಗಿ ಬುಧವಾರ ಬೆಳಗ್ಗೆ ಗಲಾಟೆ ನಡೆದಿತ್ತು. ಇದನ್ನೂ ಓದಿರಿ ಗೃಹಪ್ರವೇಶದ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಜವರಾಯ, ಲೈಟಿಂಗ್ ಅವಳಡಿಸುತ್ತಿದ್ದ ನಾಲ್ವರು ದುರ್ಮರಣ

ಜಗಳ ವಿಕೋಪಕ್ಕೆ ತಿರುಗಿದ್ದು, ಆಂಜಿನಪ್ಪ ಮತ್ತು ಅಶ್ವತ್ಥನಾರಾಯಣ ಪರಸ್ಪರ ಮಾರಾಕಾಸ್ತ್ರಗಳಿಂದ ಬಡಿದಾಡಿಕೊಂಡಿದ್ದು, ಘಟನೆಯಲ್ಲಿ ಅಪ್ಪ-ಮಗ ಸತ್ತಿದ್ದು, ಅಶ್ವತ್ಥನಾರಾಯಣ(60) ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಶ್ವತ್ಥನಾರಾಯಣ್​ಗೆ ಮೂವರು ಹೆಣ್ಣು ಮಕ್ಕಳಿದ್ದು, ಸಹೋದರ ಆಂಜನಪ್ಪನ ಮಗ ವಿಷ್ಣುವನ್ನು ದತ್ತು ತೆಗೆದುಕೊಂಡಿದ್ದ. ಗಲಾಟೆ ವೇಳೆ ಮೊದಲು ವಿಷ್ಣು ದೊಡ್ಡಪ್ಪ ಅಶ್ವತ್ಥನಾರಾಯಣನ ಪರವಾಗಿಯೇ ಇದ್ದ. ತಂದೆಯ ನಿಲುವನ್ನು ವಿರೋಧಿಸಿದ್ದ.

ಆದರೆ, ಯಾವಾಗ ಅಪ್ಪನನ್ನು ಸಾಕು ತಂದೆ ಹೊಡೆದನೋ ಆಗ ತಿರುಗಿ ಬಿದ್ದಿದ್ದಾನೆ. ನನ್ನ ತಂದೆಗೇ ಹೊಡೆಯುತ್ತೀಯಾ? ಎನ್ನುತ್ತ ದೊಡ್ಡಪ್ಪ ಅಶ್ವತ್ಥನಾರಾಯಣನ ಮೇಲೆ ಹಲ್ಲೆ ಮಾಡಿದ್ದಾನೆ. ಇದಕ್ಕೆ ನಿನ್ನಿಂದಲೇ ಗಲಾಟೆ ನಡೆದದ್ದು ಎಂದ ಅಶ್ವತ್ಥನಾರಾಯಣ ವಿಷ್ಣುವಿನ ಮೇಲೆ ಮಾರಣಾಂತಿಕ ದಾಳಿ‌ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಮೂವರ ಪೈಕಿ ಅಪ್ಪ-ಮಗ ಮೃತಪಟ್ಟಿದ್ದು, ಅಶ್ವತ್ಥನಾರಾಯಣ ಸ್ಥಿತಿ ಚಿಂತಾಜನಕವಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು‌ಮುಟ್ಟಿದೆ. ಚಿಂತಾಮಣಿ ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.‌