ನ್ಯೂಸ್

ಪ್ರಿಯಾಂಕಾ ಚೋಪ್ರಾ ಧರಿಸಿರುವ ವಾಚ್​​ ಎಷ್ಟು ಕೋಟಿ ಬೆಲೆಬಾಳುತ್ತದೆ ಗೊತ್ತಾ?

ಮುಂಬೈ: ಪ್ರಿಯಾಂಕಾ ಚೋಪ್ರಾ ಅವರ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಈ ಬಾಲಿವುಡ್‌ ಬ್ಯೂಟಿ, ಹಾಲಿವುಡ್‌ನಲ್ಲಿ ಮೆರೆಯುತ್ತಿದ್ದಾರೆ ಅಂತ ನಮ್ಮೆಲರಿಗೂ ಗೊತ್ತಿದೆ. ಇದೀಗ ನಟಿ ಪ್ರಿಯಾಂಕಾ ಚೋಪ್ರಾ ತೊಟ್ಟಿರುವ ವಾಚ್​​ ಬೆಲೆ ಸೋಶಿಯಲ್​​ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ.

ಬಾಲಿವುಡ್​​​ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಪ್ರಿಯಾಂಕಾ ಚೋಪ್ರಾ, ಈಗ ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ. ಹಲವು ಹಾಲಿವುಡ್ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಅಮೆರಿಕನ್ ಪಾಪ್ ಗಾಯಕ ನಿಕ್ ಜೋನಾಸ್ ಅವರನ್ನು ಮದುವೆಯಾದ ನಂತರ ಸುಂದರ ತಾರೆ ಹೆಚ್ಚಾಗಿ ಕ್ಯಾಲಿಫೋರ್ನಿಯಾಗೆ ಸೀಮಿತರಾಗಿದ್ದಾರೆ.

ಆದರೆ ಪ್ರಿಯಾಂಕಾ ಚೋಪ್ರಾ ಹಬ್ಬ ಹರಿದಿನಗಳು ಮತ್ತು ವಿಶೇಷ ದಿನಗಳಲ್ಲಿ ಭಾರತಕ್ಕೆ ಬರುತ್ತಿದ್ದಾರೆ. ಮುಂಬೈನಲ್ಲಿ ನಡೆಯುತ್ತಿರುವ ಜಿಯೋ ಮಾಮಿ ಫಿಲ್ಮ್ ಫೆಸ್ಟಿವಲ್ 2023 ರಲ್ಲಿ ಜಾಗತಿಕ ತಾರೆಯೊಬ್ಬರು ಸಂಚಲನ ಮೂಡಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ಜಿಯೋ ಮಾಮಿ ಮುಂಬೈ ಫಿಲ್ಮ್ ಫೆಸ್ಟಿವಲ್ 2023 ರ ಉದ್ಘಾಟನಾ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಐಷಾರಾಮಿ ವಾಚ್ ಹಾಕಿಕೊಂಡು ಭಾಗವಹಿಸಿದ್ದರು. ಎಲ್ಲರ ಕಣ್ಣುಗಳು ಈ ಗಡಿಯಾರದ ಮೇಲಿವೆ. ಆಕೆಯ ವಾಚ್ ಸುಮಾರು ರೂ. 1.5 ಕೋಟಿ ರೂ. ಬೆಲೆ ಬಾಳುತ್ತದೆ ಎನ್ನಲಾಗಿದೆ. ಇದನ್ನು 18 ಕ್ಯಾರೆಟ್ ಗುಲಾಬಿ ಚಿನ್ನದ ಕೇಸ್‌ನಿಂದ ತಯಾರಿಸಲಾಗುತ್ತದೆ.

ಜಿಯೋ ಮ್ಯಾಮಿ ಫಿಲ್ಮ್ ಫೆಸ್ಟಿವಲ್ ಕಮಿಟಿಯ ಅಧಿಕೃತ ಅಧ್ಯಕ್ಷೆಯಾಗಿ ಪ್ರಿಯಾಂಕಾ ಚೋಪ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಂದರ ಗೌನ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಮಿಂಚಿ ಎಲ್ಲರ ಗಮನ ಸೆಳೆದಿದ್ದಾಳೆ. 1.5 ಕೋಟಿ (Bvlgari Serpenti Spiga luxurious watch) ಮೌಲ್ಯದ ಬ್ಲಗರಿ ಸರ್ಪೆಂಟಿ ಸ್ಪಿಗಾ ಐಷಾರಾಮಿ ಗಡಿಯಾರವನ್ನು ಧರಿಸಿ ತಮ್ಮ ನೋಟದ ಮೂಲಕವಾಗಿ ಗಮನ ಸೆಳೆದಿದ್ದಾರೆ.