ನ್ಯೂಸ್

ಪತಿಯಾಗುವನ ಕುರಿತು ನನ್ನಲಿದ್ದ ಆಲೋಚನೆಗೆ ಇದೇ ಕಾರಣ; ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು? | Priyanka Chopra

ಮುಂಬೈ: ಬಾಲಿವುಡ್​​ನಲ್ಲಿ ಮಾತ್ರವಲ್ಲದೆ ಹಾಲಿವುಡ್​​​​​ನಲ್ಲೂ ಗುರುತಿಸಿಕೊಂಡಿರುವ ನಟ ಪ್ರಿಯಾಂಕಾ ಚೋಪ್ರಾ ಕುರಿತು ಹೊಸದಾಗಿ ಪರಿಚಯಿಸುವ ಅಗತ್ಯವಿಲ್ಲ. ಜಾಗತಿಕ ಐಕಾನ್​ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಪ್ರೀತಿಯನ್ನು ಕಂಡುಕೊಳ್ಳುವಲ್ಲಿನ ತನ್ನ ಪ್ರಯಾಣವನ್ನು ಹಾಗೂ ಸಂಗಾತಿಯಲ್ಲಿ ತಾನು ಹುಡುಕುತ್ತಿದ್ದ ಗುಣಗಳ ಬಗೆಗಿನ ಸ್ವಾರಸ್ಯಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಪ್ರಿಯಾಂಕಾ ಚೋಪ್ರಾ, ತನ್ನ ಹಿಂದಿನ ಅನುಭವಗಳಿಂದಾಗಿ ಆರಂಭದಲ್ಲಿ ಡೇಟಿಂಗ್ ಮಾಡಲು ಹಿಂಜರಿಯುತ್ತಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ಕುಟುಂಬವನ್ನು ಬಯಸುವ ವ್ಯಕ್ತಿಯೊಂದಿಗೆ ಇರಬೇಕೆಂದು ಬಯಸಿದ್ದೆ. ಆದರೆ ನನ್ನ ಹಿಂದಿನ ಸಂಬಂಧಗಳ್ಲಿ ನಾನು ಬಯಸಿದ ರೀತಿ ಯಾರು ಇರಲಿಲ್ಲ. ಅವರಿಂದ ನಾನು ಬಹಳ ದುಃಖವನ್ನು ಅನುಭವಿಸಿದ್ದೇನೆ ಎಂದು ಹೇಳಿದರು. ನಿಕ್ ಜೋನಾಸ್ ಜತೆ ಡೇಟಿಂಗ್ ಮಾಡುವ ಬಗ್ಗೆ ತನಗೆ ಖಚಿತವಿರಲಿಲ್ಲ. ಹಿಂದೆ ತನ್ನ ಸಂಬಂಧಗಳು ವಿಫಲವಾದ ಕಾರಣ ನಾನು ವಿವಾಹವಾಗುವ ಹುಡುಗನ ಕುರಿತು ನನ್ನ ಮನಸ್ಸಿನಲ್ಲಿ ಕೆಲವು ವಿಷಯಗಳಿದ್ದವು ಎಂದು ಹೇಳಿದ್ದಾರೆ.

ಮೊದಲನೆಯದು ಪ್ರಾಮಾಣಿಕತೆ, ಏಕೆಂದರೆ ನನ್ನ ಹಿಂದಿನ ಕೆಲವು ಸಂಬಂಧಗಳಲ್ಲಿ ನಾನು ಅಪ್ರಾಮಾಣಿಕತೆಯಿಂದ ನೋವನ್ನು ಅನುಭವಿಸದ್ದೆ. ಎರಡನೆಯದು ಅವನು ಕುಟುಂಬದ ಮೌಲ್ಯವನ್ನು ಅರಿತಿರಬೇಕು. ಮೂರನೆಯದು ಅವನು ತನ್ನ ವೃತ್ತಿಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿತ್ತು, ಏಕೆಂದರೆ ನಾನು ನನ್ನ ವೃತ್ತಿಯನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತೇನೆ. ನಾಲ್ಕನೆಯದು ನನ್ನೊಂದಿಗೆ ದೊಡ್ಡ ಕನಸು ಕಾಣುವ ಸೃಜನಶೀಲ ಮತ್ತು ಕಲ್ಪನೆಯನ್ನು ಹೊಂದಿರುವವರುರನ್ನು ವಿವಾಹವಾಗಬೇಕು ಎಂದುಕೊಂಡಿದೆ ಎಂದರು.

ನಿಕ್ ಬಗ್ಗೆ ನೆನಪಿಸಿಕೊಂಡು ಪ್ರಿಯಾಂಕಾ ಚೋಪ್ರಾ, ಹುಡುಗನ ಕುರಿತು ನನ್ನ ಮನಸ್ಸಿನಲ್ಲಿರುವ ಮಾನದಂಡಗಳನ್ನು ಪೂರೈಸದಿದ್ದರೆ ನಾನು ಅವನನ್ನು ಮದುವೆಯಾಗುತ್ತಿರಲಿಲ್ಲ. ನಿಮ್ಮನ್ನು ಗೌರವಿಸುವ ವ್ಯಕ್ತಿಯನ್ನು ನೀವು ಹುಡುಕಬೇಕು. ಗೌರವವು ಪ್ರೀತಿ ಮತ್ತು ವಾತ್ಸಲ್ಯಕ್ಕಿಂತ ಭಿನ್ನವಾಗಿದೆ. ನಿಮ್ಮ ರಾಜಕುಮಾರನನ್ನು ನೀವು ಕಂಡುಕೊಳ್ಳುವವರೆಗೆ ನೀವು ಬಹಳಷ್ಟು ಜನರ ಜತೆ ಡೇಟಿಂಗ್​​ ಮಾಡಬೇಕಾಗುತ್ತದೆ ಎಂದು ಹೇಳಿದರು.

ಪ್ರಿಯಾಂಕಾ ಮತ್ತು ನಿಕ್ ಜೋನಾಸ್​​​​ ಡಿಸೆಂಬರ್ 1 ಮತ್ತು 2, 2018ರಂದು ಜೋಧ್‌ಪುರದ ಉಮೈದ್ ಭವನ ಅರಮನೆಯಲ್ಲಿ ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಜನವರಿ 2022ರಲ್ಲಿ ಇಬ್ಬರೂ ಸೆರೊಗಸಿ ಮೂಲಕ ಮಗಳು ಮಾಲ್ಟಿ ಮೇರಿಯನ್ನು ಸ್ವಾಗತಿಸುವುದಾಗಿ ಅಭಿಮಾನಿಗಳೊಂದಿಗೆ ಹಂಚಿಕೊಂಡರು.(ಏಜೆನ್ಸೀಸ್​​)