ಕಲಬುರಗಿ: ಮುಂದಿನ ಆರು ತಿಂಗಳೊಳಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎಂಬ ಬಿಜೆಪಿ ಶಾಸಕ ಬಸನ್ಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದು, ರಾಜಕೀಯ ಮಾಡಲು ಅವರಿಗಷ್ಠೇ ಅಲ್ಲ ನಮಗೂ ಬರುತ್ತದೆ ಎಂದಿದ್ದಾರೆ.
ಕಲಬುರಗಿಯಲ್ಲಿ ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ ಆರು ತಿಂಗಳಲ್ಲಿ ಬಿಜೆಪಿ ಉಳಿಯಲ್ಲಾ ಇದು ನನ್ನ ಗ್ಯಾರಂಟಿ. ಆರು ತಿಂಗಳು ಕಾದು ನೋಡಿ ಎಷ್ಟು ಜನ ಬಿಜೆಪಿಯಲ್ಲಿ ಇರುತ್ತಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇವರು ಮತ್ತೊಮ್ಮೆ ಆಪರೇಷನ್ ಕಮಲ ಮಾಡುವ ಚಿಂತನೆಯಲ್ಲಿದ್ದಾರೆ. ಆದರೆ, ಕರ್ನಾಟಕದಲ್ಲಿ ಇವರ ಆಟ ನಡೆಯೊಲ್ಲ. ಕಾಂಗ್ರೆಸ್ ಪಕ್ಷದ ಹುಳುಕನ್ನು ಹುಡುಕಲು ಶ್ರಮ ಹಾಕುತ್ತಿರುವ ಇವರು ಅವರ ಪಕ್ಷದ ಅಭಿವೃದ್ಧಿಗೆ ಹಾಕಲಿ. ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಮುಂದಿನ ಆರು ತಿಂಗಳಲ್ಲಿ ಅವರ ಸರ್ಕಾರ ಮಾಡಿ ತೋರಿಸಲಿ ಎಂದು ಸವಾಲೆಸೆದಿದ್ದಾರೆ.
ಕರ್ನಾಟಕದಲ್ಲಿ ಮಣಿಪುರದ ಸ್ಥಿತಿ ನಿರ್ಮಾಣವಾಗಿದ್ಯಾ ಅಥವಾ ರಾಷ್ಟ್ರಪತಿ ಆಲ್ವಿಕೆ ತರುತ್ತಾರಾ. ಅವರ ಯೋಗ್ಯತೆನೇ ಇಷ್ಟು. ನನ್ನ ಪ್ರಕಾರ ಮುಂದಿನ ಆರು ತಿಂಗಳು ಬಿಜೆಪಿ ಉಳಿಯಲ್ಲ. ಮುಂದಿನ ಆರು ತಿಂಗಳು ಕಾದು ನೋಡಿ ಎಷ್ಟು ಜನ ಬಿಜೆಪಿಯಲ್ಲಿ ಇರುತ್ತಾರೆ ಎಂದು. ಅವರಿಗಷ್ಠೇ ಅಲ್ಲ ನಮಗೂ ರಾಜಕೀಯ ಮಾಡಲು ಬರುತ್ತದೆ.
ಸಿ.ಟಿ. ರವಿ ಹೇಳಿಗೆ ಪ್ರತಿಕ್ರಿಯಿಸಿ ಅವರು ದೇವರ ಹೆಸರಿನಲ್ಲಿ ಸುಳ್ಳು ಹೇಳಿದ್ದಾರೆ. ನಿಮ್ಮ ಬಳಿ ದಾಖಲೆ ಇದ್ದರೆ ಅದನ್ನು ಬಹಿರಂಗಪಡಿಸಿ ನ್ಯಾಯಾಂಗಕ್ಕೆ ಹೋಗೋಣಾ. ಯಾವ ದೇವಸ್ಥಾನ. ಮಠಕ್ಕೆ ಹೋಗೋದು ಬೇಡಾ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.