ಬೆಂಗಳೂರು: ಪ್ರಿಯಾ ವಾರಿಯರ್ ಕಣ್ಣು ಹೊಡೆದ ಸ್ಟೈಲ್ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್ ಆಗಿದ್ದರು. ಇದೀಗ ಪ್ರಿಯಾ ವಾರಿಯರ್ ಥೈಲ್ಯಾಂಡ್ ಪ್ರವಾಸದ ಫೋಟೋ ನೋಡಿ ಅಭಿಮಾನಿಗಳು ಮತ್ತೊಮ್ಮೆ ಕ್ಲೀನ್ ಬೌಲ್ಡ್ ಆಗಿದ್ದಾರೆ.
ಮಲಯಾಳಂ ಭಾಷೆಯಲ್ಲಿ 2019ರಲ್ಲಿ ತೆರೆಕಂಡ ಒರು ಅಡಾರ್ ಲವ್ ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾ ವಾರಿಯರ್ ಕಣ್ಣು ಹೊಡೆಯುವ ಮೂಲಕ ಫೇಮಸ್ ಆದವರು. ಇದೀಗ ಪ್ರಿಯಾ ವಾರಿಯರ್ ಥಾಯ್ಲೆಂಡ್ ಪ್ರವಾಸ ಹೋಗಿದ್ದಾರೆ. ಅಷ್ಟೇ ಅಲ್ಲಾ, ತಮ್ಮ ಥಾಯ್ಲೆಂಡ್ ಪ್ರವಾಸದ ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಿಯಾ ವಾರಿಯರ್ ತಾವು ಥಾಯ್ಲೆಂಡ್ ಹಾಗೂ ಬ್ಯಾಂಕಾಕ್ನಲ್ಲಿ ಸುತ್ತಾಡಿದಾಗ ತೆಗೆದ ಬೋಲ್ಡ್ ಫೋಟೋಗಳನ್ನು ನೋಡುತ್ತಿದ್ದಂತೆ ಮತ್ತೊಮ್ಮೆ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.
ಪ್ರಿಯಾ ವಾರಿಯಾರ್ ಥಾಯ್ಲೆಂಡ್ನಲ್ಲಿ ಟೈಗರ್ ಪಾರ್ಕ್ಗೆ ತೆರಳಿದ್ದಾರೆ. ಅಲ್ಲಿ ಹುಲಿಯನ್ನು ಮಾತನಾಡಿಸುತ್ತಿರುವ ವಿಡಿಯೋವನ್ನು ಕೂಡಾ ಶೇರ್ ಮಾಡಿದ್ದಾರೆ.