ನ್ಯೂಸ್

ಭೀಕರ ಅಪಘಾತ; ಕಾರ್​​ನಲ್ಲಿದ್ದ 6 ಜನ ಸ್ಥಳದಲ್ಲೇ ದುರ್ಮರಣ, ಮೂವರು ಗಂಭೀರ

ಚಾಮರಾಜನಗರ: ಖಾಸಗಿ ಬಸ್ ಹಾಗೂ ಇನ್ನೋವಾ ನಡುವೆ ನಡೆದ ಅಪಘಾತದಲ್ಲಿ ಕಾರ್​​ನಲ್ಲಿದ್ದ 6 ಜನ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಕೊಳ್ಳೇಗಾಲ, ಟಿ.ನರಸೀಪುರ ಮುಖ್ಯರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಮತ್ತು ಇನೋವಾ ಕಾರು ನಡುವೆ ಅಪಘಾತದಲ್ಲಿ ಕಾರ್​​ನಲ್ಲಿದ್ದ ಕಾರ್ ನಲ್ಲಿದ್ದ 5ಜನ ಸೇರಿದಂತೆ 1 ಮಗು ಪ್ರಾಣ ಬಿಟ್ಟಿದ್ದಾರೆ. ಕಾರ್​ನಲ್ಲಿದ್ದವರು ಬಳ್ಳಾರಿ ಮೂಲದವರು ಎನ್ನಲಾಗಿದೆ. ಮೂವರಿಗೆ ಗಂಭೀರ ಗಾಯವಾಗಿದೆ.

ಇನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಸ್ಥಳೀಯರು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಟಿ.ನರಸೀಪುರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
https://www.vijayavani.net/bjp-criticises-congress-for-not-attending-niti-ayog-meet