ನ್ಯೂಸ್

ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿ, ಬೆದರಿಕೆ ಹಾಕಿದ್ದ ಪ್ರಿನ್ಸಿಪಾಲ್​ ಅಂದರ್​​..

ನಯಾಗಢ: ವಿದ್ಯಾರ್ಥಿನಿಯರನ್ನು ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಕಾಲೇಜ್​ನ ಪ್ರಾಂಶುಪಾಲರನ್ನು ಬಂಧಿಸಲಾಗಿರುವ ಘಟನೆ ಒಡಿಶಾದ ನಯಾಗಢ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿ ಪ್ರಿನ್ಸಿಪಾಲ್​ನನ್ನು ಪ್ರದೀಪ್ತ ಹತಿ ಎಂದು ಗುರುತಿಸಲಾಗಿದ್ದು, ಇಟಮಟಿ ಪೊಲೀಸ್ ವ್ಯಾಪ್ತಿಯ ನಯಗಢದ ಕೆಂದುಧಿಪಿ ನಬಾ ಚೌಧರಿ ಮಹಾವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ವಿಜ್ಞಾನ ವಿಭಾಗದ ಕೆಲವರು ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲೇಜಿನಲ್ಲಿ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ ಹಾಗೂ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಾಂಶುಪಾಲರನ್ನು ಸಂಪರ್ಕಿಸಲು ಹೇಳಿದ್ದರು.

ಇದನ್ನೂ ಓದಿ: ರೋಗಿಗೆ ಮೂತ್ರ ಚೀಲದ ಬದಲು ಕೂಲ್​ ಡ್ರಿಂಕ್​ ಬಾಟಲಿ ಬಳಕೆ: ಅವ್ಯವಸ್ಥೆ ಕಂಡು ನೆಟ್ಟಿಗರು ಗರಂ

ಅದರಂತೆ ವಿದ್ಯಾರ್ಥಿನಿಯರು ಪ್ರಾಂಶುಪಾಲನ್ನು ಸಂಪರ್ಕಿಸಿದ್ದ ವೇಳೆ ಆತ, ಸಮಸ್ಯೆಗಳಿಗೆ ಗಮನ ಕೊಡದೇ ಹುಡುಗಿಯರು ತನ್ನ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿ ತಮ್ಮ ಕೆನ್ನೆಯನ್ನು ಚಿವುಟಿದ್ದಾನೆ. ಅಲ್ಲದೇ, ಘಟನೆಯನ್ನು ಇತರರಿಗೆ ಬಹಿರಂಗಪಡಿಸಿದರೆ ಪರೀಕ್ಷೆಯಲ್ಲಿ ಅಂಕಗಳನ್ನು ಕಡಿತಗೊಳಿಸುವುದಾಗಿ ಪ್ರಾಂಶುಪಾಲರು ಬೆದರಿಕೆ ಹಾಕಿದ್ದಾರೆ ಎಂದು ಹುಡುಗಿಯರು ಆರೋಪಿಸಿದ್ದಾರೆ.

ಈ ಸಂಬಂಧ ಬಾಲಕಿಯರು ಇಟಮಟಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಕಲ್ಯಾಣಾಧಿಕಾರಿಗಳಿಗೂ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಕಾಲೇಜಿನ ಪ್ರಾಂಶುಪಾಲರನ್ನು ಬಂಧಿಸಿದ್ದಾರೆ. ಆರೋಪಿ ಪ್ರಿನ್ಸಿಪಾಲ್ ಮತ್ತು ಇಬ್ಬರು ದೂರುದಾರ ಬಾಲಕಿಯರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಬಂಧನದ ನಂತರ, ಪ್ರಾಂಶುಪಾಲರನ್ನು ನ್ಯಾಯಾಲಯಕ್ಕೆ ರವಾನಿಸಲಾಗಿದೆ.(ಏಜೆನ್ಸೀಸ್​)