Narendra Modi: ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಹಾಡನ್ನು ಹಂಚಿಕೊಳ್ಳುವ ಮೂಲಕ ದೇಶದ ನಾಗರಿಕರಿಗೆ ನವರಾತ್ರಿ ಹಬ್ಬದ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ:AK-47 ಸಂಭ್ರಮಾಚರಣೆ: ಧೋನಿ, ವಿರಾಟ್ ಇದೇ ರೀತಿ ಸಂಭ್ರಮಿಸಿಲ್ಲವೇ? ಐಸಿಸಿ ಎದುರು ಸೊಕ್ಕಿನ ಉತ್ತರ ಕೊಟ್ಟ ಫರ್ಹಾನ್!
ತಮ್ಮ ಎಕ್ಸ್ ಖಾತೆಯಲ್ಲಿ ಪ್ರಸಿದ್ಧ ಗಾಯಕಿ ಎಸ್ ಜಾನಕಿ ಅವರ ಕಮಲದ ಮೊಗದೊಳೆ ಗೀತೆಯನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ನವರಾತ್ರಿಯ ಸಮಯದಲ್ಲಿ, ದೇವಿಯು ಎಲ್ಲಾ ಭಕ್ತರಿಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಆಕೆಯ ಪ್ರೀತಿಯ ವಾತ್ಸಲ್ಯವು ಪ್ರತಿಯೊಬ್ಬರ ಜೀವನದಲ್ಲೂ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ ಎಂದು ಬರೆದುಕೊಂಡಿದ್ದಾರೆ.