ನವದೆಹಲಿ: ಬಿಜೆಪಿ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಪ್ರೇಮ್ ಶುಕ್ಲಾ ಮತ್ತು ಶಾಜಿಯಾ ಇಲ್ಮಿಯನ್ನು ನೇಮಕ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಪಕ್ಷದ ನಿಲುವನ್ನು ಸಮರ್ಥಿಸಿಕೊಳ್ಳುವಲ್ಲಿ ಮತ್ತು ಪ್ರಚಾರ ಮಾಡುವಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅವರ ನೇಮಕಾತಿಯ ಬಗ್ಗೆ ಬುಧವಾರ ಪ್ರಕಟಣೆ ಹೊರಡಿಸಲಾಗಿದೆ.
ಬಿಜೆಪಿ ಪಕ್ಷವು ರಾಷ್ಟ್ರೀಯ ಮಟ್ಟದಲ್ಲಿ ಈಗ ನೇಮಕವಾಗಿರುವ ವಕ್ತಾರರನ್ನೂ ಸೇರಿ ಒಟ್ಟು 25 ವಕ್ತಾರರನ್ನು ಹೊಂದಿದೆ. (ಏಜೆನ್ಸೀಸ್)