ಸಾಂದರ್ಭಿಕ ಚಿತ್ರ 
ನ್ಯೂಸ್

ಫ್ರಿಡ್ಜ್‌ಗಾಗಿ ನಡೆದಿತ್ತು 7 ತಿಂಗಳ ಗರ್ಭಿಣಿಯ ಹತ್ಯೆ: ಪೊಲೀಸರ ತನಿಖೆಯಿಂದ ತಿಳಿದು ಬಂದಿದಿಷ್ಟು..

ಪುರ್ನಿಯಾ: ವರದಕ್ಷಿಣೆ ರೂಪದಲ್ಲಿ ಫ್ರಿಡ್ಜ್​​ ನೀಡಲಿಲ್ಲ ಎಂಬ ಕಾರಣಕ್ಕೆ 7 ತಿಂಗಳ ಗರ್ಭಿಣಿಯನ್ನು ಗಂಡನ ಮನೆಯವರು ಕೊಲೆ ಮಾಡಿರುವ ಘಟನೆ ಬಿಹಾರದ ಪುರ್ನಿಯಾದಲ್ಲಿ ನಡೆದಿದೆ.

ಅಂಗೂರಿ ಬೇಗಂ(30) ಮೃತ ದುರ್ದೈವಿಯಾಗಿದ್ದು, 2012ರಲ್ಲಿ ಮೊಮಿನಾತ್ ಆಲಂ ಎಂಬಾತನನ್ನು ವಿವಾಹವಾಗಿದ್ದು, ದಂಪತಿಗೆ ನಾಲ್ಕು ಮಕ್ಕಳಿದ್ದರು. ಅಂಗೂರಿ ಐದನೇ ಮಗುವಿಗಾಗಿ ಗರ್ಭಿಣಿಯಾಗಿದ್ದು, ಆಕೆ ಬೇಲಾ ಪ್ರಸಾದಿ ಭವಾನಿಪುರದಲ್ಲಿರುವ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು.

ಇದನ್ನೂ ಓದಿ: 20 ನಿಮಿಷದಲ್ಲಿ 2 ಲೀಟರ್ ನೀರು ಕುಡಿದ ಮಹಿಳೆ: ಮುಂದೆ ನಡೆದದ್ದು ಮಾತ್ರ ದುರಂತ..

ಇದೇ ವೇಳೆ ಮೃತಳ ಸಹೋದರ ಕೌಶರ್ ರಾಜಾ, ತನ್ನ ಸಹೋದರಿಯನ್ನು ಫ್ರಿಡ್ಜ್​​ ಸಲುವಾಗಿ ಕೊಲೆ ಮಾಡಲಾಗಿದೆ. ಈ ಹಿಂದೆಯೂ ಆಕೆಯ ಅತ್ತೆಯ ಮನೆಯಲ್ಲಿ ದೈಹಿಕವಾಗಿ ಹಲ್ಲೆ ನಡೆಸಿದ್ದರು ಎಂದು ಹೇಳಿದ್ದಾನೆ. ಇನ್ನು ಅಂಗೂರಿ ಸಾವಿನ ನಂತರ ಆಕೆಯ ಸಂಬಂಧಿಕರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ತಲುಪುತ್ತಲೇ ಮೃತಳ ಗಂಡನ ಮನೆಯವರ ಸಂಬಂಧಿಕರು ಮನೆಯಿಂದ ಓಡಿಹೋಗಿದ್ದಾರೆ.

ಸದ್ಯ, ಶವವನ್ನು ಪೂರ್ಣಿಯಾ ಸದರ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಮಹಿಳೆಯನ್ನು ಹೊಡೆದು ಸಾಯಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್​​)